ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪರಿಷತ್ ಗದ್ದಲ ಕೈ, ಕಮಲ ನಾಯಕರ ಹೈಡ್ರಾಮಾ- ಹೀಗಿತ್ತು ಸಿ.ಟಿ. ರವಿ ಅರೆಸ್ಟ್ ಟು ರಿಲೀಸ್

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಂವಿಧಾನಿಕ ಪದ ಬಳಸಿದ್ದ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿಯನ್ನ ಬಂಧಿಸಿದ್ರು. 18 ಗಂಟೆಗಳ ಕಾಲ ಹೈಡ್ರಾಮಾ ಬಳಿಕ‌ ಪೊಲೀಸರು ಸಿ.ಟಿ.ರವಿಯನ್ನ ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರು ಪಡಿಸುವ ಮುನ್ನವೇ ಹೈಕೋರ್ಟ್ ಬೇಲ್ ನೀಡಿ ಪೊಲೀಸ್ರಿಗೆ ಶಾಕ್ ನೀಡಿದೆ.

ಸುವರ್ಣ ವಿಧಾನಸೌಧದ ಚಳಿಗಾಲದ ಅಧಿವೇಶನದ ಕೊನೆ ದಿನವಾದ ನಿನ್ನೆ ಬಿಜೆಪಿ MLC ಸಿ.ಟಿ.ರವಿಯನ್ನ ಬೆಳಗಾವಿ ಹಿರೇಬಾಗೇವಾಡಿ ಪೊಲೀಸರು‌ ಅರೆಸ್ಟ್ ಮಾಡಿದ್ರು. ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಕ್ಕೆ ಹಿರೇಬಾಗೇವಾಡಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಸುವರ್ಣ ವಿಧಾನಸೌಧದಿಂದಲೇ ಪೊಲೀಸರು ಸಿನಿಮೀಯ ರೀತಿ ಹೊತ್ತುಕೊಂಡು ಅರೆಸ್ಟ್ ಮಾಡಿದ್ರು.

ಸುವರ್ಣಸೌಧದಿಂದ ಅರೆಸ್ಟ್ ಮಾಡಿದ ಸಿ.ಟಿ.ರವಿಯನ್ನ ಪೊಲೀಸರು ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ್ರು. ಈ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌, ಯತ್ನಾಳ್‌, ಬೆಲ್ಲದ್‌, ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ರು.

ಸಿ.ಟಿ.ರವಿಯೊಂದಿಗೆ ಠಾಣೆಯಲ್ಲಿ ಸಮಾಲೋಚನೆ ಮಾಡಿದ ಬಿಜೆಪಿ ನಾಯಕರು, ತಕ್ಷಣವೇ ಠಾಣೆ ಬೇಲ್ ಮೇಲೆ ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದ್ರು. ಆ ಬಳಿಕ ಖಾನಾಪುರ ಪೊಲೀಸ್ ಠಾಣೆಯಿಂದ ರಾತ್ರಿ ಇಡೀ ನಡೆದಿದ್ದು ಹೌಡ್ರಾಮಾ.

ಹೌದು, ಬಿಜೆಪಿ ನಾಯಕರು ವಾಪಸ್ ಹೋದ ಬಳಿಕ ಪೊಲೀಸರು ಮತ್ತೆ ಸಿ.ಟಿ.ರವಿಯನ್ನ ಬಲವಂತವಾಗಿ ವಶಕ್ಕೆ ಪಡೆದು ಜೀಪ್‌ನಲ್ಲಿ ಹತ್ತಿಸಿಕೊಂಡ್ರು. ಈ ವೇಳೆ ಸಿ.ಟಿ.ರವಿ ತಲೆಗೆ ಗಾಯವಾಗಿ ರಕ್ತಸ್ರಾವ ಆಯ್ತು. ಈ ಮಧ್ಯೆ ಖಾನಾಪುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗ್ತಿದ್ದೇವೆ ಎಂದ ಪೊಲೀಸರು, ರಾತ್ರಿಯಿಡೀ ಸಿ.ಟಿ.ರವಿಯನ್ನ ಬೆಳಗಾವಿ ಜಿಲ್ಲೆಯ ಕಿತ್ತೂರು, ಅಲ್ಲಿಂದ ಧಾರವಾಡ ಜಿಲ್ಲೆ, ಗದಗ ಹಾಗೂ ಯರಗಟ್ಟಿ, ರಾಮದುರ್ಗ, ಮುಧೋಳ ತಾಲ್ಲೂಕಿನ ಗಡಿವರೆಗೂ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ನೈಸರ್ಗಿಕ ಕ್ರಿಯೆಗೆ ನಿಲ್ಲಿಸಿದಾಗ ಸಿ.ಟಿ.ರವಿ ಯರಗಟ್ಟಿಯಲ್ಲಿ ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮಾಡಿದ್ರು. ಪೊಲೀಸರ ವರ್ತನೆಯನ್ನ ಸಿ.ಟಿ. ರವಿ ಬಲವಾಗಿ ಖಂಡಿಸಿದ್ರು.

ಈ ಮಧ್ಯೆ ಖಾನಾಪುರ ಠಾಣೆಯಲ್ಲಿ ಸಿ.ಟಿ.ರವಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಸೇರಿ ಬೆಂಬಲಿಗರ ವಿರುದ್ಧ ಕೇಸ್ ನೀಡಿದ್ರು. ಆದ್ರು ಪೊಲೀಸರು ಸಿ.ಟಿ.ರವಿಯವರ ಕೇಸ್ ದಾಖಲಿಸದೇ ಇರೋದು ಬಿಜೆಪಿ ನಾಯಕರನ್ನ ಕೆರಳಿಸಿತು.

ಇನ್ನೂ ರಾತ್ರಿಯೆಲ್ಲಾ ಪೊಲೀಸರ ಹೌಡ್ರಾಮಾ ಬಳಿಕ ಸಿ.ಟಿ.ರವಿಯನ್ನ ಅಂಕಲಗಿ ಪೊಲೀಸ್ ಠಾಣೆಯಿಂದ ನೇರವಾಗಿ ಬೆಳಗಾವಿ ತಾಲೂಕಿನ ಮುತಗಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ವೈದ್ಯಕೀಯ ತಪಾಸಣೆ ನಡೆಸಿದ್ರು. ‌ಅನಂತರ ಬೆಳಗ್ಗೆ 10.30ಕ್ಕೆ ನೇರವಾಗಿ ಸಿ.ಟಿ.ರವಿಯನ್ನ ಬೆಳಗಾವಿ 5ನೇ ಜೆ.ಎಂ.ಎಫ್‌.ಸಿ ಕೋರ್ಟ್ ಮುಂದೆ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಪೊಲೀಸರು ಹಾಜರು ಪಡಿಸಿದ್ರು. ಇದೇ ಸಂದರ್ಭದಲ್ಲಿ ಕೋರ್ಟ್ ಹಾಲಿನಲ್ಲಿ ವಿಪಕ್ಷ ನಾಯಕ ಅಶೋಕ್‌, ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಸಿ.ಟಿ.ರವಿಯನ್ನ ಭೇಟಿ ಮಾಡಿದ್ರು.‌ ಅನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಪೊಲೀಸರು ಪ್ರಕರಣದ ಮಾಹಿತಿ ನೀಡಿದ್ರು.

ಇದೇ ಸಂದರ್ಭದಲ್ಲಿ ಸಿ.ಟಿ.ರವಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿ ವಾದವನ್ನ ಮಂಡಿಸಿದ್ರು. ನ್ಯಾಯಾಧೀಶರ ಮುಂದೆ ಸ್ವತಃ ಸಿ.ಟಿ.ರವಿ ಪೊಲೀಸರು ನಡೆಸಿಕೊಂಡು ಬಂದ ರೀತಿಯನ್ನ ವಿವರಿಸಿ ತಮ್ಮ ಹೇಳಿಕೆಯನ್ನ ದಾಖಲಿಸಿದ್ರು. ‌

ಅತ್ತ ಸಿ.ಟಿ.ರವಿ ಪರ ವಕೀಲರು ಪೊಲೀಸರು ಕಾನೂನು ಬಾಹಿರವಾಗಿ‌ ಕೇಸ್ ದಾಖಲಿಸಿದ್ದು, ಅರೆಸ್ಟ್‌ ಮಾಡಿದನ್ನ ಎಳೆಎಳೆಯಾಗಿ ವಿವರಿಸಿದ್ರು. ‌ಇಷ್ಟೇ ಅಲ್ಲದೆ, ಸ್ಪೀಕರ್ ಅನುಮತಿ ಇಲ್ಲದೇ ಕೇಸ್ ದಾಖಲಿಸಿದ್ದನ್ನ ಕೋರ್ಟ್ ಗಮನಕ್ಕೆ ತಂದರು.

ಪೊಲೀಸರ, ವಕೀಲರ ವಾದ ಆಲಿಸಿದ ಬಳಿಕ ಬೆಳಗಾವಿ 5ನೇ ಜೆ.ಎಂ.ಎಫ್‌.ಸಿ ನ್ಯಾಯಾಲಯವು ಪ್ರಕರಣವನ್ನ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶಿಸಿತು. ಹೀಗಾಗಿ ಸಿ.ಟಿ.ರವಿಯನ್ನ ಪೊಲೀಸರು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋದ್ರು.

ಪೊಲೀಸರ ವರ್ತನೆಗೆ ಮನನೊಂದ ಕೋರ್ಟ್ ಹಾಲಿನಲ್ಲೇ ಸಿ.ಟಿ.ರವಿ ಕಣ್ಣೀರು ಹಾಕಿದ್ರೆ. ‌ಅತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರೆಸ್ ಮೀಟ್ ನಲ್ಲಿ ಮತ್ತೊಮ್ಮೆ ಕಣ್ಣೀರು ಹಾಕಿದ್ರು. ಅಲ್ಲದೆ, ಈ ಪ್ರಕರಣ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಮಧ್ಯೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಒಟ್ಟಾರೆ ಸದ್ಯ ಸಿ.ಟಿ.ರವಿ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶಿಫ್ಟ್ ಆಗಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಿದ್ರೆ, ಅತ್ತ ಹೈಕೋರ್ಟ್‌ನಲ್ಲಿ ಸಿ.ಟಿ. ರವಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.

Edited By : Ashok M
PublicNext

PublicNext

21/12/2024 08:43 am

Cinque Terre

26.84 K

Cinque Terre

1

ಸಂಬಂಧಿತ ಸುದ್ದಿ