ಬೆಳಗಾವಿ : ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅಶ್ಲೀಲ ಪದಬಳಕೆ ಆರೋಪದ ಅರ್ಜಿ ವಿಚಾರಣೆ ಕೇಸ್ ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೆಎಂಎಫ್‌ಸಿ ಕೋರ್ಟ್ ಆದೇಶ ಹೊರಡಿಸಿದೆ.
ಇಂದು ಬೆಳಗಾವಿಯ 5ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸಿ.ಟಿ ರವಿ ಅವರನ್ನ ಹಿರೇಬಾಗೇವಾಡಿ ಪೊಲೀಸರು ಹಾಜರು ಪಡಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜೆಎಂಎಫ್‌ಸಿ ಕೋರ್ಟ್ ಕೇಸ್ ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಟ್ರಾಂಜಿಟ್ ವಾರೆಂಟ್ ಮೇಲೆ ಪೊಲೀಸರು ಸಿ.ಟಿ ರವಿಯನ್ನ ಕರೆದುಕೊಂಡು ಹೋಗಲಿದ್ದಾರೆ. ಬೀಗಿ ಭದ್ರತೆ ಯಲ್ಲಿ ಅವರನ್ನು ಶಿಫ್ಟ್ ಮಾಡಲಾಗುತ್ತಿದೆ.
PublicNext
20/12/2024 01:49 pm