ಭೋಪಾಲ್: ಆದಾಯ ತೆರಿಗೆ (ಐಟಿ) ಇಲಾಖೆಯು ಭೋಪಾಲ್‌ನ ಮಿಂಡೋರಿ ಅರಣ್ಯದಲ್ಲಿ ನಿಂತಿದ್ದ ಕಾರಿನಲ್ಲಿದ್ದ 40.47 ಕೋಟಿ ರೂಪಾಯಿ ಮೌಲ್ಯದ 52 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ), ಲೋಕಾಯುಕ್ತ ಮತ್ತು ಐಟಿ ಇಲಾಖೆಯಿಂದ ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ನಡೆಯುತ್ತಿರುವ ದಾಳಿಗಳ ಸಂದರ್ಭದಲ್ಲಿ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿದೆ. ಸುಳಿವಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಟಿ ಅಧಿಕಾರಿಯೊಬ್ಬರು, 'ಇಲಾಖೆಗೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸುಳಿವು ಸಿಕ್ಕಿತು. ನಾವು ಕರೆ ಸ್ವೀಕರಿಸಿದ ನಂತರ 30 ವಾಹನಗಳಲ್ಲಿ 100 ಪೊಲೀಸರ ತಂಡವು ಸ್ಥಳಕ್ಕೆ ಹೋದೆವು. ಪೊಲೀಸರು ಬಂಧಿಸಲು ಪ್ರಯತ್ನಿಸುತ್ತಿರುವ ಬಿಲ್ಡರ್ ಹೆಸರಿನಲ್ಲಿ ಕಾರನ್ನು ನೋಂದಾಯಿಸಲಾಗಿದೆ' ಎಂದು ತಿಳಿಸಿದ್ದಾರೆ.
PublicNext
20/12/2024 07:21 pm