ನವದೆಹಲಿ: ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಶುಕ್ರವಾರ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ '1984 ರ ಗಲಭೆ' ಎಂಬ ಹಣೆಪಟ್ಟಿ ಹೊಂದಿರುವ ಚೀಲವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹೌದು. ಈ ವಾರದ ಆರಂಭದಲ್ಲಿ ಪಾರ್ಲಿಮೆಂಟ್‌ನಲ್ಲಿ ಪ್ಯಾಲೆಸ್ತೀನ್ ಮತ್ತು ಬಾಂಗ್ಲಾದೇಶಿ ಹಿಂದೂಗಳ ಉಲ್ಲೇಖಗಳಿರುವ ಬ್ಯಾಗ್‌ಗಳನ್ನು ಹಾಕಿಕೊಂಡು ಪ್ರಿಯಾಂಕಾ ಗಾಂಧಿ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದೆ ಸಾರಂಗಿ ಅವರು '1984 ರ ಗಲಭೆ' ಎಂಬ ಹಣೆಪಟ್ಟಿ ಹೊಂದಿರುವ ಬ್ಯಾಗ್ ಅನ್ನು ನೀಡಿದ್ದಾರೆ. 1984ರ ಸಿಖ್ ವಿರೋಧಿ ದಂಗೆಯನ್ನು ಎತ್ತಿ ತೋರಿಸಿದ ಸಾರಂಗಿ, ಈ ಹಿಂದೆ ಕಾಂಗ್ರೆಸ್ ಏನು ಮಾಡಿದೆ ಎಂದು ಇಂದಿನ ಪೀಳಿಗೆಗೆ ತಿಳಿಯಬೇಕು ಎಂದು ಹೇಳಿದ್ದಾರೆ.
PublicNext
20/12/2024 07:46 pm