ಸಕಲೇಶಪುರ : ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ನ ಬ್ಯಾಟರಿ ಬಿಚ್ಚಿ ಕಳವು ಮಾಡಿಕೊಂಡು ಹೋಗಿವಾಗ ಬ್ಯಾಟರಿ ಸಮೇತ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ, ಬೈಕೆರೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಮೂಲದ ಗೌತಮ್, ದರ್ಶನ್ ಬ್ಯಾಟರಿ ಸಮೇತ ಸಿಕ್ಕಿಬಿದ್ದ ಚೋರರು. ಗ್ರಾಮಕ್ಕೆ ಬಂದಿದ್ದ ಇಬ್ಬರು ನಿಲ್ಲಿಸಿದ್ದ ವಾಹನಗಳು ಹಾಗೂ ಬ್ಯಾಟರಿ ಕಳ್ಳತನ ಮಾಡಲು ಹೊಂಚು ಹಾಕಿದ್ದರು. ಜನರು ಇದ್ದ ಕಾರಣ ಕಳವು ಮಾಡಲು ಸಾಧ್ಯವಾಗದ ಕಾರಣ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹುಡುಕಾಡಿದ್ದರು. ಇದೇ ವೇಳೆ ಬೈಕೆರೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಗ್ರಾಮದ ಪೂರ್ಣೇಶ್ ಎಂಬುವವರು ರಸ್ತೆ ಬದಿ ಟ್ರ್ಯಾಕ್ಟರ್ ನಿಲ್ಲಿಸಿ ಕಾಫಿ ತೋಟಕ್ಕೆ ತೆರಳಿದ್ದರು. ಇದನ್ನು ಕಂಡ ಚೋರರು ಟ್ರ್ಯಾಕ್ಟರ್‌ನ ಬ್ಯಾಟರಿ ಬಿಚ್ಚಿ ಕದ್ದೊಯ್ಯೋವಾಗ ಗ್ರಾಮಸ್ಥರು ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
Kshetra Samachara
20/12/2024 08:16 am