ವಿಧಾನ ಪರಿಷತ್ತಿನ ಕಲಾಪ ಅನಿರ್ಧಿಷ್ಠಾವಧಿಗೆ ಮುಂದೂಡಿದ ಬಳಿಕ ಕಾಂಗ್ರೆಸ್ ಸರ್ಕಾರದ "ಗೌರವಾನ್ವಿತ ಮಂತ್ರಿಗಳು', ಕಾಂಗ್ರೆಸ್ಸಿನ ಶಾಸಕರು ನಡೆಸಿದ ದಾಂಧಲೆಗೆ ವಿಡಿಯೋ - ಆಡಿಯೋ ಸಾಕ್ಷಿ ಇದೆ. ಸರ್ಕಾರದ ಸಚಿವರು ಸುವರ್ಣ ಸೌಧದಲ್ಲಿ ನಡೆಸಿದ ಗೂಂಡಾ ವರ್ತನೆಗೆ ಸಾಕ್ಷ್ಯಾಧಾರವಿದೆ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತಿರಿ ಸನ್ಮಾನ್ಯ "ನ್ಯಾಯನೀತಿಪರ' ಮುಖ್ಯಮಂತ್ರಿಗಳೇ? ಎಂದು ಬಿಜೆಪಿ ಎಂಎಲ್‌ಸಿ ಸಿಟಿ ರವಿ ಟ್ವಿಟ್ ಮಾಡಿದ್ದಾರೆ.
ಹಾಗೆಯೇ ಸಾಕ್ಷ್ಯಾಧಾರಗಳಿಲ್ಲದ ಸುಳ್ಳುಸುದ್ದಿ ಹಬ್ಬಿಸುವ, ಅಪಪ್ರಚಾರ ಮಾಡುವ ಕೆಲಸ ಮಾಡುವ ಬದಲಾಗಿ ಕ್ಯಾಮರಾದಲ್ಲಿ ದಾಖಲಾಗಿರುವ ಆಧಾರ ಗಮನಿಸಿ ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಿ ಮುಖ್ಯಮಂತ್ರಿಗಳೇ ಎಂದು ಕಿಡಿಕಾರಿದ್ದಾರೆ.
ಇಂದು ವಿಧಾನಪರಿಷತ್ನಲ್ಲಿ ಅಂಬೇಡ್ಕರ್ ವಿಚಾರವಾಗಿ ಪ್ರತಿಭಟನೆ ವೇಳೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ರಾದ್ಧಾಂತ ಮಾಡಿಕೊಂಡಿದ್ದಾರೆ. ಪರಸ್ಪರ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟಿಸುವ ವೇಳೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ನಡುವೆ ಭಾರೀ ಜಟಾಪಟಿ ನಡೆದಿದೆ. ಈ ವೇಳೆ ಸಿ.ಟಿ.ರವಿ. ಸಚಿವೆ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಬಗ್ಗೆ ಸಚಿವೆ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ಪರಿಷತ್‌ನಲ್ಲಿ ಪ್ರತಿಭಟಿಸುವಾಗ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರು ಡ್ರಗ್ ಅಡಿಕ್ಟ್ ಅಂತ ಕರೆದಿದ್ದಾರೆ ಎನ್ನಲಾಗಿದೆ. ಆಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಮಿತ್ ಶಾರನ್ನ ಕೊಲೆಗಡುಕ ಅಂತಾ ಕರೆಯಬಹುದಾ ಎಂದು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಅವರು Pro*stitute (ವೇ*) ಎಂಬ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಇದೇ ವಿಚಾರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೆರೆಗೆ ಸಿಟಿ ರವಿಯನ್ನು ಬಂಧಿಸಲಾಗಿದೆ.
PublicNext
19/12/2024 09:00 pm