ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING : ಸಚಿವೆ ಹೆಬ್ಬಾಳ್ಕರ್‌ಗೆ ನಿಂದನೆ ವಿಚಾರ - ಸಿ.ಟಿ ರವಿಯನ್ನ ಇಂದು ಕೋರ್ಟ್‌ಗೆ ಹಾಜರು ಪಡಿಸಲಿರುವ ಪೊಲೀಸ್

ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ ಆರೋಪದ ಮೇರೆಗೆ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿಯನ್ನ ಪೊಲೀಸರು ಇಂದು ನ್ಯಾಯಲಯಕ್ಕೆ ಹಾಜರು ಪಡಿಸಲಿದ್ದಾರೆ.

ಸಿ.ಟಿ ರವಿ ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ಇನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನಿರಾಕರಣೆ ಮಾಡಿದ್ದಲ್ಲಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಆವರಣದಲ್ಲಿರೋ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಾಜರು ಪಡಿಸಲಿದ್ದಾರೆ.

ಇನ್ನು ಸದನದಲ್ಲಿ ನಡೆದ ಘಟನೆ ಹಾಗೂ ಸಿ.ಟಿ ರವಿ ಅವರು ಮಾತನಾಡಿರುವ ಕುರಿತು ವಿಡಿಯೋವನ್ನು ಈಗಾಗಲೇ ಪೊಲೀಸರು ಪಡರದಿದ್ದು, ಈ ವಿಡಿಯೋ, ಆಡಿಯೋ ಆಧರಿಸಿ ವಿಚಾರಣೆ ನಡೆಸಲಿದ್ದಾರೆ. ಬಳಿಕ ವಿಡಿಯೋವನ್ನ ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಲಿದ್ದಾರೆ ಎಂದು ಪಬ್ಲಿಕ್ ನೆಕ್ಸ್ಟ್‌ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Edited By : Abhishek Kamoji
PublicNext

PublicNext

20/12/2024 08:39 am

Cinque Terre

26.31 K

Cinque Terre

7

ಸಂಬಂಧಿತ ಸುದ್ದಿ