ಬೇಲೂರು : ಮೆಕ್ಕೆಜೋಳ ಕಟಾವು ಮಾಡುವ ವೇಳೆ ಕೊಳಕು ಮಂಡಲದ ಹಾವು ಕಚ್ಚಿದ್ದು ವ್ಯಕ್ತಿ ಆಸ್ಪತ್ರೆಗೆ ಹಾವಿನ ಜೊತೆ ಬರುವ ಮೂಲಕ ಆಶ್ಚರ್ಯ ಮೂಡಿಸಿದ್ದಾನೆ.
ಹಾವೇರಿ ಮೂಲದ ಮುತ್ತು (40) ಹಾವಿನೊಟ್ಟಿಗೆ ಆಸ್ಪತ್ರೆಗೆ ಬಂದಿದ್ದಾನೆ. ಬೇಲೂರು ತಾಲ್ಲೂಕಿನ ಹಾರೋಹಳ್ಳಿ ಬಳಿ ಘಟನೆ ನಡೆದಿದೆ. ಹೊಲದಲ್ಲಿ ಮೆಕ್ಕೆಜೋಳ ಕಟಾವು ಮಾಡುವಾಗ ಕೊಳಕು ಮಂಡಲದ ಹಾವು ಕಚ್ಚಿದೆ.
ಕೂಡಲೇ ಹಾವನ್ನು ಹಿಡಿದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಂಡು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಮುತ್ತು ಬಂದಿದ್ದಾನೆ. ಹಾವು ಹಿಡಿದುಕೊಂಡು ಬಂದಿದ್ದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.
PublicNext
19/12/2024 02:14 pm