ಬೇಲೂರು : ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದಲ್ಲಿ ಕಳೆದ ರಾತ್ರಿ ಎರಡು ಆನೆಗಳು ರಸ್ತೆ ದಾಟಿ ಎಸ್ಟೇಟ್ ಗೇಟ್ ತೆರೆದು ಒಳ ಬರುವ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.
ಈ ವೇಳೆ ಕೆಲವೇ ಕ್ಷಣಗಳ ಅಂತರದಲ್ಲಿ ದ್ವಿಚಕ್ರ ವಾಹನವೊಂದು ಅದೇ ರಸ್ತೆಯಲ್ಲಿ ತೆರಳಿದೆ. ಅದೃಷ್ಟವಶಾತ್ ಅದಾಗಲೇ ಆನೆಗಳು ಅಲ್ಲಿಂದ ತೆರಳಿದ್ದವು. ಇದರಿಂದಾಗಿ ಸ್ವಲ್ಪದರಲ್ಲಿ ವಾಹನ ಸವಾರರು ಕಾಡಾನೆಯಿಂದ ಬಚಾವಾಗಿದ್ದಾರೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಲ್ಲಿನ ಜನರು ನಿತ್ಯವೂ ಪ್ರಾಣ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಶಾಶ್ವತ ಪರಿಹಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
PublicNext
13/12/2024 07:33 am