ಬೆಂಗಳೂರು: ಶಿವಣ್ಣನನ್ನ ತಬ್ಬಿ ಕಿಚ್ಚ ಸುದೀಪ್ ಎಮೋಷನಲ್ ಆಗಿದ್ದಾರೆ. ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿಕಿತ್ಸೆಗಾಗಿ ಅಮೆರಿಕಾ ತೆರಳಲಿದ್ದಾರೆ. ಅವರು ವಿದೇಶಕ್ಕೆ ಹಾರುವ ಮುನ್ನ ಕಿಚ್ಚ ಸುದೀಪ್ ಶಿವಣ್ಣನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಭಾವುಕರಾಗಿದ್ದಾರೆ.
ಇತ್ತೀಚಿಗೆ ಶಿವಣ್ಣ ಅವರು ಆರೋಗ್ಯ ಸಮಸ್ಯೆಯಿಂದಾಗಿ ಬಳಲುತ್ತಿರುವ ವಿಚಾರ ತಿಳಿದೇ ಇದೆ. ಈ ಬಗ್ಗೆ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಶಿವಣ್ಣ ಅವರು ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ವಿದೇಶಕ್ಕೆ ಹೊರಡಲಿದ್ದು, ಕಿಚ್ಚ ಸುದೀಪ್ , ಮಾಜಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಮಧು ಬಂಗಾರಪ್ಪ ಶಿವಣ್ಣನ ಮನೆಗೆ ಭೇಟಿ ನೀಡಿದರು. ಈ ವೇಳೆ ಶಿವಣ್ಣನನ್ನು ತಬ್ಬಿಕೊಂಡು ಸುದೀಪ್ ಭಾವುಕರಾದರು.
PublicNext
18/12/2024 04:59 pm