ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರಿದ ಗಜಪಡೆ ದಾಂಧಲೆ

ಸಕಲೇಶಪುರ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದ್ದು, ಗಜಪಡೆ ದಾಳಿಗೆ ಅಪಾರ ಪ್ರಮಾಣದ ಕಟಾವಿಗೆ ಬಂದಿದ್ದ ಮತ್ತು ಕಟಾವು ಮಾಡಿದ್ದ ಭತ್ತದ ಬೆಳೆ ನಾಶವಾಗಿರುವ ಘಟನೆ

ಸಕಲೇಶಪುರ ತಾಲ್ಲೂಕಿನ, ಹಾಡ್ಲಹಳ್ಳಿ ಮತ್ತು ಮರ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾಡ್ಲಹಳ್ಳಿ ಗ್ರಾಮದ ರಾಕೇಶ್ ಎಂಬುವವರ ಗದ್ದೆಯಲ್ಲಿ ನಿನ್ನೆ ಕಟಾವು ಮಾಡಿ ಇಂದು ಕಣಕ್ಕೆ ಸಾಗಿಸಲು ಸಿದ್ದತೆ ನಡೆಸಿದ್ದ ಭತ್ತದ ಪೈರನ್ನು ಗಜಪಡೆ ದಾಳಿ ಮಾಡಿ ನಾಶ ಮಾಡಿವೆ.

ಮುಂಜಾನೆ ದಾಳಿ ಮಾಡಿರುವ ಕಾಡಾನೆಗಳು

ಸಂಪೂರ್ಣ ಭತ್ತದ ಬೆಳೆಯನ್ನು ನಾಶಪಡಿಸಿವೆ.ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು,ಭತ್ತದ ಬೆಳೆ ಕಳೆದುಕೊಂಡು ಅನ್ನದಾತ ಕಂಗಲಾಗಿದ್ದಾನೆ.

ಮತ್ತೊಂದೆಡೆ ಮರ್ಜನಹಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆಯನ್ನು ನಾಶಪಡಿಸಿದ ಕಾಡಾನೆಗಳು

ತಿಂದು, ತುಳಿದು ನೆಲಸಮ ಮಾಡಿವೆ.ಗ್ರಾಮದ ಗೂಳಿರಾಜು, ಕೃಷ್ಣೇಗೌಡ ಎಂಬುವವರಿಗೆ ಸೇರಿದ ಭತ್ತದ ಗದ್ದೆಗೆ ದಾಳಿ ಮಾಡಿ ನಾಶಪಡಿಸಿವೆ.

ಕಾಡಾನೆ ಕಾಟದಿಂದ ರೋಸಿ ಹೋದ ಮಲೆನಾಡು ಭಾಗದ ರೈತರು,ಕಾಡಾನೆಗಳ ಉಪಟಳಕ್ಕೆ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

18/12/2024 11:36 am

Cinque Terre

500

Cinque Terre

0