ಕಾರವಾರ: ತಾಲೂಕಿನ ತೋಡೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಆಕಳುವಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಗೋವಾ ರಾಜ್ಯದ ವಾಸ್ಕೋ ಮೂಲದ ಆಯೀಶ ಅನಂತ ಗಡೇಕರ ಚಲಾಯಿಸುತ್ತಿದ್ದ ಬೈಕ್‌ಗೆ ಬೆಂಕಿ ಹೊತ್ತಿದೆ.
ಈತ ಅಂಕೋಲಾ ಕಡೆಯಿಂದ ಕಾರವಾರದ ಕಡೆಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ತೋಡೂರು ಬಳಿ ಹೆದ್ದಾರಿಯಲ್ಲಿ ಆಕಳು ಅಡ್ಡಿ ಬಂದು ಬೈಕ್ ನಿಯಂತ್ರಿಸಲಾಗದೇ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ದಾರಿಯಲ್ಲಿ ಜರಿದುಹೋಗಿದ್ದು, ಬೆಂಕಿ ಹೊತ್ತಿ ಉರಿದಿದೆ.
ಘಟನೆಯಲ್ಲಿ ಸವಾರ ಬಚಾವ್ ಆಗಿದ್ದಾನೆ. ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
15/12/2024 10:48 pm