ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಮಲ್ಲೆಬೋರನಹಟ್ಟಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀಪಾಂಡುರಂಗಸ್ವಾಮಿ ದಿಂಡಿ ಉತ್ಸವ

ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ 5ನೇ ವರ್ಷದ ಶ್ರೀ ಪಾಂಡುರಂಗ ರುಕ್ಮಣಿ ದೇವರ ದಿಂಡಿ ಉತ್ಸವ ಅದ್ದೂರಿಯಾಗಿ ಜರುಗಿತು.

ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಮಂಡಳಿಯ ಯುವಕರು ಪಾಂಡುರಂಗಸ್ವಾಮಿ ಭಕ್ತರು ದಿಂಡಿ ಉತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಿದರು.

ಜಿನಿಗಿ ಹಳ್ಳದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.ಅಲ್ಲಿಂದ ಮಹಿಳೆಯರು ಕುಂಭಮೇಳದೊಂದಿಗೆ ವಿವಿಧ ಭಜನಾ ತಂಡಗಳೊಂದಿಗೆ ಶ್ರೀ ಪಾಂಡುರಂಗ ರುಕ್ಮಿಣಿ ದೇವಿಯ ನಾಮ ಸ್ಮರಣೆ ಮಾಡುತ್ತಾ ಗ್ರಾಮಕ್ಕೆ ಪ್ರವೇಶಿಸಿದರು,ನಂತರ ಗ್ರಾಮದ ಶ್ರೀ ಮಾರಿಕಾಂಬ ದುರ್ಗಾಂಬಿಕ ದೇವಸ್ಥಾನ ಮುಂಭಾಗದಲ್ಲಿ ಶ್ರೀ ಪಾಂಡುರಂಗ ಸ್ವಾಮಿ ರುಕ್ಮಿಣಿ ಮೂರ್ತಿಗಳಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜೆ ಕಾಕಡಾರತಿ ನೆರವೇರಿಸಿ ನಂತರ ನಿವೃತ್ತ ಶಿಕ್ಷಕ ಹಾಗೂ ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನದ ಅಧ್ಯಕ್ಷರು ಕಲ್ಲೆದೇವರಪುರ ಕಿಲಾರಿ ಕೃಷ್ಣಮೂರ್ತಿರವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಜನಾ ಮತ್ತು ಕೀಲು ಕುದುರೆ ನೃತ್ಯಗಳು ನಡೆದವು.

Edited By : PublicNext Desk
Kshetra Samachara

Kshetra Samachara

15/12/2024 06:51 pm

Cinque Terre

720

Cinque Terre

0

ಸಂಬಂಧಿತ ಸುದ್ದಿ