ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಬಾಲಕನ ಚಿಕಿತ್ಸೆಗೆ ಬೇಕಿದೆ ಸಹೃದಯಿ ದಾನಿಗಳ ನೆರವು

ಚಿಕ್ಕೋಡಿ: ಮೆಟಾಸ್ಟಾಟಿಕ್‌ ನ್ಯೂರೋಬ್ಲಾಸ್ಟೋಮಾ ಕ್ಯಾನ್ಸರ್‌ನಿಂದ ಬಳಲುತ್ತಿರುವ ಚಿಕ್ಕೋಡಿ ಪಟ್ಟಣದ ಸಮರ್ಥ್ ಪ್ರಕಾಶ ಸಾವಂತ ಎಂಬ ಬಾಲಕನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ. ಬಾಲಕ ಸಮರ್ಥ್ ಒಂದು ವರ್ಷದಿಂದ ಪುಣೆಯ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಇನ್ನೂ ಗುಣಮುಖವಾಗಿಲ್ಲ.

ಈತನಿಗೆ ನೀಡಬೇಕಾದ ಚುಚ್ಚುಮದ್ದು ಭಾರತದಲ್ಲಿ ಲಭ್ಯವಿಲ್ಲದ್ದರಿಂದ ವಿದೇಶದಿಂದ ತರಿಸಬೇಕಾಗುತ್ತಿದೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಬೇಕಾಗಿದ್ದು, ಲಕ್ಷಾಂತರ ರೂ. ವೈದ್ಯಕೀಯ ವೆಚ್ಚಕ್ಕಾಗಿ ಸಹೃದಯರಿಂದ ಆರ್ಥಿಕ ನೆರವು ಬೇಕಾಗಿದೆ.

ನೆರವು ನೀಡ ಬಯಸುವವರು ಬಾಲಕನ ತಂದೆ ಪ್ರಕಾಶ್ ತಾನಾಜಿ ಸಾವಂತ ಅವರ ಕೆನರಾ ಬ್ಯಾಂಕ್ ಖಾತೆ ಸಂ. 05092250032035 (ಐಎಫ್ ಸಿ ಸಿಎನ್ ಆರ್ ಬಿ 0010509) ಇಲ್ಲಿಗೆ ವರ್ಗಾಯಿಸಬಹುದು. ಪ್ರಕಾಶ ಸಾವಂತ ಅವರ ಮೊಬೈಲ್ ಸಂಖ್ಯೆ 9149676387

Edited By : PublicNext Desk
Kshetra Samachara

Kshetra Samachara

15/12/2024 01:08 pm

Cinque Terre

3.22 K

Cinque Terre

0

ಸಂಬಂಧಿತ ಸುದ್ದಿ