ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಲಾರಿ, ಟ್ರಕ್‌ ಚಾಲಕರು ಸಂಚಾರ ನಿಯಮ ಪಾಲಿಸಬೇಕು’ - ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್

ದಾವಣಗೆರೆ: ‘ದೇಶದಲ್ಲಿ ಶೇ 75ರಷ್ಟು ಅಪಘಾತ ಚಾಲಕರ ನಿರ್ಲಕ್ಷ್ಯದಿಂದ ಆಗುತ್ತದೆ. ಮುಂಜಾಗ್ರತೆ ಇದ್ದರೆ ಹೆಚ್ಚಿನ ಅಪಘಾತಗಳನ್ನು ತಡೆಗಟ್ಟಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಇಂದು ನಗರದ ಹಳೆ ಪಿ.ಬಿ. ರಸ್ತೆಯ ಲಾರಿ ಟರ್ಮಿನಲ್‌ನಲ್ಲಿ ಪೊಲೀಸ್ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಂಜಾಗ್ರತೆ ಮುಖ್ಯ. ಅಜಾಗರೂಕ ಚಾಲನೆ, ಅತಿ ವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಇವು ನಮ್ಮ ನಿರ್ಲಕ್ಷ್ಯ. ರಸ್ತೆ ಸರಿ ಇಲ್ಲದೇ ಆಗುವ ಅಪಘಾತಗಳಿಗಿಂತ ಹೆಚ್ಚಿನ ಅಪಘಾತಗಳು ಇಂತಹ ಕಾರಣಕ್ಕೆ ಆಗುತ್ತವೆ’ ಎಂದು ಹೇಳಿದರು.

‘ಲಾರಿ, ಟ್ರಕ್‌ ಚಾಲಕರು ತಮ್ಮ ಎದುರು ಹೋಗುತ್ತಿರುವ ದ್ವಿಚಕ್ರ ವಾಹನ ಚಾಲಕರ ಬಗ್ಗೆಯೂ ಗಮನಹರಿಸಬೇಕು. ದೇಶದಲ್ಲಿ ಶೇ 15ರಷ್ಟು ಅಪಘಾತಗಳು ಟ್ರಕ್‌ ಹಾಗೂ ಲಾರಿಗಳಿಂದ ಆಗುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಲಾರಿ, ಟ್ರಕ್‌ ಚಾಲಕರು ಸಂಚಾರ ನಿಯಮ ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರ ನಿಯಮ ಮಾಡಿದಾಗ ಪ್ರತಿಭಟನೆ ಮಾಡುತ್ತೀರಿ. ನಿಮ್ಮ ವಾಹನದ ಮೇಲೆ ಹಿಡಿತ ಇದ್ದರೆ, ನಿಯಮ ಪಾಲಿಸಿದರೆ ಪ್ರತಿಭಟನೆ ಮಾಡುವ ಪ್ರಮೇಯ ಬರುವುದಿಲ್ಲ. ನಿಮ್ಮ ನಿರ್ಲಕ್ಷ್ಯದಿಂದ ಆಗುವ ಅಪಘಾತದಿಂದ ನಿಮ್ಮ ಕುಟುಂಬದ ಜತಗೆ ಇನ್ನೊಬ್ಬರ ಕುಟುಂಬವೂ ಸಂಕಷ್ಟ ಎದುರಿಸಬೇಕು. ‌ಈ ಬಗ್ಗೆ ಮನವರಿಕೆ ಮಾಡಿಕೊಳ್ಳಿ. ಸಲಹೆ ಪಡೆದು ಸುಮ್ಮನೆ ಹೋಗದೆ, ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಗೊತ್ತಿದ್ದೇ ನಿಯಮ ಉಲ್ಲಂಘಿಸುವುದು ಸಾಮಾನ್ಯ. ಇದು ಆಗಬಾರದು. ಜಾಗೃತಿ ಇದ್ದರೆ ಅಪಘಾತ ತಡೆ ಸಾಧ್ಯ’ ಎಂದರು.

Edited By : Abhishek Kamoji
Kshetra Samachara

Kshetra Samachara

14/12/2024 03:25 pm

Cinque Terre

600

Cinque Terre

0

ಸಂಬಂಧಿತ ಸುದ್ದಿ