ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ : ದೊಡವಾಡ ಗ್ರಾಪಂ ಚುನಾವಣೆ - ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ

ಬೈಲಹೊಂಗಲ : ತಾಲೂಕಿನ ದೊಡವಾಡ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.

24 ಕ್ಷೇತ್ರಗಳಿಗೆ ಚುನಾವಣೆಯಲ್ಲಿ 40 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಮೊದಲೆ ಕೆಲ ವಾರ್ಡುಗಳಲ್ಲಿ 5 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಹಿಂದುಳಿದ ವರ್ಗ ಅ ವಿಭಾಗದಲ್ಲಿ ಅವಿರೊಧವಾಗಿ 3 ನೇ ವಾರ್ಡಿನ ವಿಠ್ಠಲ ಗಾಬಿ, 4 ನೇ ವಾರ್ಡಿನಲ್ಲಿ ಮಡಿವಾಳಪ್ಪ ಕುರಿ, 7 ನೇ ವಾರ್ಡಿನಲ್ಲಿ ಅನುಸೂಚಿತ ಮಹಿಳಾ ವಿಭಾಗದಲ್ಲಿ ಕಾಂತವ್ವ ಗೇಟಿ, ನನಗುಂಡಿಕೊಪ್ಪ ಗ್ರಾಮದ 8 ನೇ ವಾರ್ಡಿಗೆ ಮಹಾಂತೇಶ ಅಸುಂಡಿ, ಸುವರ್ಣ ಏಳಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. 

ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ವಿಭಾಗದಿಂದ 1 ನೇ ವಾರ್ಡಿನಲ್ಲಿ ಅನುಸೂಚಿತ ಪಂಗಡ ಮಹಿಳಾ ವಿಭಾಗದಿಂದ ಸಂಗೀತಾ ಚಂದರಗಿ, ಮಹಿಳಾ ಸಾಮಾನ್ಯ ವಿಭಾಗ ಮಹಾದೇವಿ ತುಪ್ಪದ, ಹಿಂದುಳಿದ ಅ ವರ್ಗದಿಂದ ಮಹಮ್ಮದ್ ಗೌಸ್ ದೊಡಮನಿ, ಸಾಮಾನ್ಯ ವಿಭಾಗದಲ್ಲಿ ಈರಪ್ಪ ಚೌಡಣ್ಣವರ,  2 ನೇ ವಾರ್ಡಿನಲ್ಲಿ ಹಿಂದುಳಿದ ಅ ವರ್ಗದಿಂದ ಶಮಶಾದಬಿ ನದಾಫ, ಮಹಿಳಾ ವಿಭಾಗ ಶೋಭಾ ಮಡಿವಾಳರ, ಸಾಮಾನ್ಯ ವಿಭಾಗ ರಮೇಶ ಸಪ್ಪಡ್ಲಿ, 3 ನೇ ವಾರ್ಡಿನಲ್ಲಿ ಮಹಿಳಾ ವಿಭಾಗದಲ್ಲಿ ವಿಜಯಾ ಪಾಟೀಲ, ಸಾಮಾನ್ಯ ವಿಭಾಗದಲ್ಲಿ ಮಂಜುನಾಥ ಅಕ್ಕಿ, ಬಸಪ್ಪ ಅಸುಂಡಿ,  4 ನೇ ವಾರ್ಡಿನಿಂದ ಮಹಿಳಾ ವಿಭಾಗದಲ್ಲಿ ಶಿವಲಿಂಗವ್ವ ಬಶೆಟ್ಟಿ, ಸಾಮಾನ್ಯ ವಿಭಾಗದಲ್ಲಿ ಮಲ್ಲಿಕಾರ್ಜುನ ಅಂದಾನಶೆಟ್ಟಿ,  5 ನೇ ವಾರ್ಡ ಹಿಂದುಳಿದ ವರ್ಗ ಅ ವಿಭಾಗದಿಂದ ರಜಿಯಾ ಮುಜಾವರ, ಸಾಮಾನ್ಯ ಮಹಿಳಾ ಸಾವಿತ್ರಿ ಹಳ್ಳದ, ಸಾಮಾನ್ಯ ಮಹೇಶ ಕೇಸನವರ,  6 ನೇ ವಾರ್ಡಿನಲ್ಲಿ ಹಿಂದುಳಿದ ವರ್ಗ ಅ ವಿಭಾಗದಲ್ಲಿ ಸಕ್ಕೂಬಾಯಿ ಕಾಳಿ, ಸಾಮಾನ್ಯ ನಾಗಯ್ಯ ದಾಭಿಮಠ,  7 ನೇ ವಾರ್ಡ ಸಾಮಾನ್ಯ ಮಹಿಳಾ ವಿಭಾಗ ಕಾಶವ್ವ ಶಿವಧೂತನವರ, ಸಾಮಾನ್ಯ ಸುರೇಶ ಮೊರೆನ್ನವರ ಆಯ್ಕೆಯಾಗಿದ್ದಾರೆ. 

ಚುನಾವಣಾಧಿಕಾರಿ, ತಹಶೀಲ್ದಾರ ಹಣಮಂತ ಶಿರಹಟ್ಟಿ ಇವರ ಆಯ್ಕೆಯನ್ನು ಘೋಷಿಸಿದರು. ಆಯ್ಕೆಯಾದ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪರಸ್ಪರ ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ, ಜೆಡಿಎಸ್ (ಎನ್‍ಡಿಎ) ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ರ್ಯರ್ಥಿಗಳ ಬಗ್ಗೆ ಸ್ಪಸ್ಟತೆ ಕಂಡು ಬರುತ್ತಿಲ್ಲ. ಪಕ್ಷೇತರ ಅಭ್ಯರ್ಥಿಗಳು ಆಡಳಿತ ಚುಕ್ಕಾಣಿಗೆ ಯಾವ ಪಕ್ಷಕ್ಕೆ ಒಲಿದು ಬರಲಿದ್ದಾರೋ ಕಾದು ನೋಡಬೇಕಾಗಿದೆ. 

Edited By : PublicNext Desk
Kshetra Samachara

Kshetra Samachara

14/12/2024 02:50 pm

Cinque Terre

2.92 K

Cinque Terre

0

ಸಂಬಂಧಿತ ಸುದ್ದಿ