ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಪಂಚಮಸಾಲಿ ಮೇಲೆ ದೌರ್ಜನ್ಯ ಖಂಡಿಸಿ ನಾಳೆ 'ರಾಸ್ತಾ ರೋಕೋ'

ಬೈಲಹೊಂಗಲ: ಪಂಚಮಸಾಲಿಗಳ ಮೇಲೆ ಮಂಗಳವಾರ ಸುವರ್ಣವಿದಾನಸೌಧದ ಮುಂದೆ ನಡೆದ ಲಾಟಿ ಚಾರ್ಜ್ ಖಂಡಿಸಿ ಬಸವಜಯಮೃತ್ಯುಂಜಯ ಸ್ವಾಮೀಜಿ ಕ್ಷಮಾರ್ಪಣೆ ಕೇಳಬೇಕೆಂದು ಆಗ್ರಹಿಸಿ ಗುರುವಾರ ಬೆಳಿಗ್ಗೆ 10ಘಂಟೆಯಿಂದ‌ ರಾಸ್ತಾ ರೋಕೋ ನಡೆಸಲು ಬೈಲಹೊಂಗಲ ಪಂಚಮಸಾಲಿ ಘಟಕ‌ ನಿರ್ಣಯಿಸಿದರು.

ಪಟ್ಟಣದ ಸೋ.ಸ.ಖಾ. ಕಛೇರಿಯಲ್ಲಿನಡೆದ ಪೂರ್ವಭಾವಿಸಭೆಯಲ್ಲಿ ಸಮಾಜದ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ ಮಾತನಾಡಿ, ಸಮಾಜದ ಜನರು ನ್ಯಾಯ ಕೇಳಲು ಹೊದವರ ಮೇಲೆ ಲಾಟಿ ಚಾರ್ಜ್ ನಡೆಸಿ ಲಿಂಗಾಯತ ಪಂಚಮಸಾಲಿ ಸಮಾಜದ ಅಸ್ಮಿತತೆಗೆ ದಕ್ಕೆ ತಂದಿರುವ ಸಿದ್ದರಾಮಯ್ಯನವರ ಸರ್ಕಾರದ ನಡೆ ಖಂಡನೀಯ ಎಂದರು.

ನ್ಯಾಯವಾದಿ ಎಫ್‌ಎಸ್.ಸಿದ್ದನಗೌಡರ, ಮಾಜಿ ಜಿಪಂ ಸದಸ್ಯ ಶಂಕರ ಮಾಡಲಗಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಅಧಿಕಾರಿಗಳನ್ನು ಛೂ ಬಿಟ್ಟು ಹೋರಾಟ ಹತ್ತಿಕ್ಕುವ ಕಾಂಗ್ರೆಸ್ ಸರ್ಕಾರದ ನಡೆಗೆ ಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಲು ಸಮಾಜ ಸಿದ್ದವಿದೆ. ಶಾಂತಿಯುತ ಸಮಾಜದ ಮೇಲೆ‌ ಪೋಲಿಸ್ ದೌರ್ಜನ್ಯ ನಡಿಸಿದ ನಿಮ್ಮ ನಡೆಗೆ ಜನರೆ ಉತ್ತರಿಸುತ್ತಾರೆ. ಕೇವಲ ರಾಸ್ತಾ ರೋಕೋ ಮಾಡಿ ಬೀಡುವದಿಲ್ಲ. ಸಮಾಜದ ಗುರುಗಳ ಕ್ಷಮಾಪಣೆ ಕೇಳಿ ಘಟನಗೆ ಕಾರಣರಾದ ಅಧಿಕಾರಿಗಳನ್ನ ಅಮಾನತು ಮಾಡದೆ ಹೊದರೆ ಮುಂಬರುವ ದಿನಗಳಲ್ಲಿ ಇನ್ನು ಉಗ್ರ ಹೊರಾಟ ಮಾಡಲಾಗುವದೆಂದರು.

ಚನ್ನಮ್ಮ‌ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಗೂಂಡ್ಲೂರ,ಸಮಾಜದ ಪ್ರದಾನ ಕಾರ್ಯದರ್ಶಿಗಳಾದ ಮಹೇಶ ಹರಕುಣಿ ಮಾತನಾಡಿ, ಗುರುವಾರ ನಡೆಯುವ ಪ್ರತಿಭಟಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೈಲಹೊಂಗಲ ನಾಡಿನ ನಾಗರಿಕರು ಪಾಲ್ಗೊಂಡು ಪ್ರತಿಭಟಣೆಯನ್ನು ಯಶಸ್ವಿಯಾಗಿಸೊಣ ಸರದಕಾರದ ಅನ್ಯಾಯವನ್ನು ಖಂಡಿಸೋಣ ಎಂದರು.

ನ್ಯಾಯವಾದಿಗಳಾದ ಎಮ್.ವಾಯ್.ಸೋಮಣ್ಣವರ, ಎಮ್.ವಿ.ಮತ್ತಿಕೊಪ್ಪ, ಚಂದ್ರು ವಣ್ಣುರ, ಸಮಾಜದ ಮುಖಂಡರಾದ ಮಹಾಂತೇಶ ತುರಮರಿ, ಬು.ಬಿ.ಸಂಗನಗೌಡರ, ಶಿವಾನಂದ ಬೆಳಗಾವಿ, ಶಿವಾನಂದ ಬಡ್ಡಿಮನಿ, ಬಾಳನಗೌಡ ಪಾಟೀಲ, ಮಹೇಶ ಕೊಟಗಿ, ಶ್ರೀಶೈಲ ಶರಣಪ್ಪನವರ, ಸಂತೋಷ ಕೊಳವಿ, ಚಂದನ ಕೌಜಲಗಿ, ಮಡಿವಾಳಪ್ಪ ಚಿಕ್ಕೊಪ್ಪ ಸೇರಿದಂತೆ ಇತರರು ಇದ್ದರು.

Edited By : PublicNext Desk
PublicNext

PublicNext

11/12/2024 02:54 pm

Cinque Terre

8.27 K

Cinque Terre

0

ಸಂಬಂಧಿತ ಸುದ್ದಿ