ಬೈಲಹೊಂಗಲ: ತಾಲೂಕಿನ ಸಂಪಗಾಂವ ಗ್ರಾ.ಪಂ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜಂಟಿ ನಿರ್ದೇಶಕ ವೇಣುಗೋಪಾಲ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳ್ಳುತ್ತಿರುವ “ಬೂದು ನೀರು ನಿರ್ವಹಣಾ ಘಟಕಗಳ (ಜೆ.ಡಬ್ಲ್ಯೂ.ಎಮ್) ಸ್ಥಳ ಪರಿಶೀಲನೆ ಹಾಗೂ ಡಿಪಿಆರ್ ಕುರಿತು ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿದರು.
ಗ್ರಾಮದ ಓಣಿ ಹಾಗೂ ಮನೆ-ಮನೆಗಳಿಗೆ ಭೇಟಿ ನೀಡಿ ಬೂದು ನೀರು ಮತ್ತು ಚರಂಡಿ ನೀರುಗಳ ಹರಿವಿಕೆ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದರು. ಪ್ರತಿ ನಿತ್ಯ ಸಾರ್ವಜನಿಕರು ಬಳಕೆ ಮಾಡಿರುವ (ಸ್ಥಾನದ ನೀರು, ಬಟ್ಟೆ ತೋಳೆದ ನೀರು ಹಾಗೂ ಪಾತ್ರೆಗಳನ್ನು ತೋಳೆದ) ನೀರು ವ್ಯವಸ್ಥೀತವಾಗಿ ಹಾಗೂ ವೈಜ್ಞಾನಿಕವಾಗಿ ದಡ ಸರ್ಪಡೆಯಾಗಬೇಕು ಎಂದು ವಿವರಿಸಿದರು.
ತಾಪಂ ನರೇಗಾ ಸಹಾಯಕ ವಿಜಯ ಪಾಟೀಲ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಜ್ಯೋತಿ ಉಪ್ಪಿನ, ಜಿಪಂ ಐಇಸಿ ಸಂಯೋಜಕ ಪ್ರಮೋದ ಗೋಡೆಕರ, ತಾಪಂ ತಾಂತ್ರಿಕ ಸಂಯೋಜಕ ನಾಗರಾಜ್ ಯರಗುದ್ದಿ, ಮುರಗೇಶ ಯಂಕಂಚಿ, ಎಸ್ ವ್ಹಿ ಹಿರೇಮಠ, ಸುನೀಲ್ ಅವರನಾಳ, ಪ್ರದೀಪ್ ಮುರಗೋಡ, ಪ್ರಕಾಶ ಬೈಲಾಪ್ಪಗೋಳ ಹಾಗೂ ಇತರರು ಹಾಜರಿದ್ದರು.
Kshetra Samachara
11/12/2024 07:05 pm