ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಲೂರು: ಸಾಲ ಬಾಧೆ ತಾಳಲಾರದೇ ಕೃಷಿ ಹೊಂಡಕ್ಕೆ ಹಾರಿ ದಂಪತಿ ಆತ್ಮಹತ್ಯೆ

ಆಲೂರು: ಸಾಲ ಬಾಧೆ ತಾಳಲಾರದೆ ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲೂಕಿನ ಪಾಳ್ಯ ಹೋಬಳಿ ಕಟ್ಟೆಗದ್ದೆ ಗ್ರಾಮದಲ್ಲಿ ನೆಡೆದಿದೆ.

ಗ್ರಾಮದ ನಟೇಶ್ (55) ಹಾಗೂ ಚಿನ್ನಮ್ಮ (45) ಆತ್ಮಹತ್ಯೆ ಮಾಡಿಕೊಂಡಿರುವ ಮೃತ ದುರ್ದೈವಿಗಳಾಗಿದ್ದಾರೆ.

ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಕೃಷಿ ಹೊಂಡಕ್ಕೆ ಕಳೆದ ರಾತ್ರಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಪತ್ನಿ ಚಿನ್ನಮ್ಮನ ಶವ ನೀರಿನಲ್ಲಿ ತೇಲುತ್ತಿದ್ದರಿಂದ ಕೆರೆಯಿಂದ ಶವವನ್ನು ಕಂಡು ಗ್ರಾಮಸ್ಥರು ಆಲೂರು ಪೊಲೀಸ್ ಠಾಣೆಗೆ ಕೂಡಲೇ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Ashok M
PublicNext

PublicNext

12/12/2024 01:01 pm

Cinque Terre

18.7 K

Cinque Terre

0

ಸಂಬಂಧಿತ ಸುದ್ದಿ