ಹಾಸನ: ಮಾದಕ ವಸ್ತುಗಳ ಜಾಲವನ್ನ ಸ್ಥಳೀಯರೇ ಪತ್ತೆ ಹಚ್ಚಿರುವ ಘಟನೆ ನಗರದ ಬಾಹರ್ ಪೇಟೆಯಲ್ಲಿ ನಡೆದಿದೆ.
ಮನೆಯೊಂದರಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದ ಸ್ಥಳೀಯರು ಮಾದಕ ವಸ್ತು ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಥಳಿಸಿದ್ದಾರೆ. ಫಜಲ್ ಅಂಡ್ ಟೀಂನಿಂದ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು , ಸ್ಥಳದಿಂದ ಪರಾರಿಯಾಗಿದ್ದಾನೆ.
ನಾಲ್ವರನ್ನ ಹಿಡಿದು ಥಳಿಸಿರುವ ಸ್ಥಳೀಯರು ನಂತರ ಪೊಲೀಸರ ವಶಕೊಪ್ಪಿಸಿದ್ದಾರೆ. ಹಾಸನದ ಪೆನ್ ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
06/12/2024 01:28 pm