ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ರೈತ ಸಂಘದಿಂದ ‌ಎಸ್ ಪಿಗೆ ಮನವಿ

ಕೋಲಾರ : ತಹಶೀಲ್ದಾರ್ ಕಚೇರಿ ಮುಂದೆ ಶಾಂತಿಯುತ ಹೋರಾಟ ಮಾಡುತ್ತಿದ್ದ ರೈತ ಸಂಘದ ಕಾರ್ಯಕರ್ತರ ಮೇಲೆ ರಮೇಶ್‌ಕುಮಾರ್ ಬೆಂಬಲಿಗರು ಮಾಡಿರುವ ಹಲ್ಲೆ, ದೌರ್ಜನ್ಯ ಮತ್ತು ಬಾಬಾ ಸಾಹೇಬ್ ಪೋಟೋಗೆ ಅವಮಾನ ಮಾಡಿರುವ ಅನುಚಿತ ವರ್ತನೆ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಬಾಬಾ ಸಾಹೇಬ್ ಡಾ. ಬಿ.ಆರ್ ಆಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಅನ್ಯಾಯದ ವಿರುದ್ದ ದ್ವನಿ ಎತ್ತುವ ಹಕ್ಕಿದೆ. ಅದರಂತೆ ಪ್ರಜಾಪ್ರಭುತ್ವದಲ್ಲಿ ಪ್ರಜಾ ಸೇವಕರಾಗಿ ಕೆಲಸ ಮಾಡುವ ತಾಲ್ಲೂಕಿನ ಪ್ರಥಮ ಪ್ರಜೆಯಾಗಿರುವ ದಂಡಾಧಿಕಾರಿಗಳು ನ್ಯಾಯ ಕೇಳಲು ಬರುವ ಹೋರಾಟಗಾರರಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

11/12/2024 07:00 pm

Cinque Terre

240

Cinque Terre

0

ಸಂಬಂಧಿತ ಸುದ್ದಿ