ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಶನಿವಾರಸಂತೆಯಲ್ಲಿ ಸಂಭ್ರಮದಿಂದ ಜರುಗಿದ ಹನುಮ ಜಯಂತಿ, ಶೋಭಾಯಾತ್ರೆ

ಕೊಡಗು: ಶನಿವಾರಸಂತೆ ಹಿಂದೂ ಜಾಗರಣೆ ವೇದಿಕೆ ವತಿಯಿಂದ ಹನುಮ ಜಯಂತಿ ಪ್ರಯುಕ್ತ 3ನೇ ವರ್ಷದ ಅದ್ದೂರಿ ಶೋಭಾಯಾತ್ರಾ ಕಾರ್ಯಕ್ರಮ ನಡೆಯಿತು.

ಪಟ್ಟಣದ ಕೆಆರ್‌ಸಿ ವೃತ್ತವನ್ನು ಹಳದಿ ಬಣ್ಣದ ತಳಿರು ತೋರಣದಿಂದ ಅಲಂಕರಿಸಿದ್ದರು. ಇದರಿಂದ ಪಟ್ಟಣದ ಕೆಆರ್‌ಸಿ ವೃತ್ತ ಕೇಸರಿಮಯಗೊಂಡಿತ್ತು. ಹನುಮ ಜಯಂತಿ ಪ್ರಯುಕ್ತ ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚೌಡೇಶ್ವರಿ ಬನದಲ್ಲಿ ಗೋ ಪೂಜೆಯ ನಂತರ ಶೋಭಯಾತ್ರೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಹೋಮ, ಮಹಾಪೂಜೆ, ಮಹಾಮಂಗಳಾರತಿ ಬಳಿಕ ಶೋಭಯಾತ್ರಾ ಮೆರವಣಿಗೆ ನಡೆಯಿತು.

ಶೋಭಯಾತ್ರೆಯು ಪಟ್ಟಣದ ಮುಖ್ಯರಸ್ತೆ ಮೂಲಕ ಗುಡುಗಳಲೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿದ ಶನಿವಾರಸಂತೆ ಬೈಪಾಸ್ ರಸ್ತೆ ಮೂಲಕ ವಾಪಾಸಾಗಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿ ಮಂಟಪದಕ್ಕೆ ಬಂದು ಪೂರ್ಣಗೊಂಡಿತು. ಮೆರವಣಿಗೆಯಲ್ಲಿ ಬೆಳ್ಳಿರಥ, ನಾಸಿಕ್ ಬ್ಯಾಂಡ್, ಚಂಡೆವಾದ್ಯದೊಂದಿಗೆ 3 ಅಡಿ ಎತ್ತರದ ಪಂಚಲೋಹದ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ಶೋಭಯಾತ್ರಾ ಮೆರವಣಿಗೆಯಲ್ಲಿ ಕೊಂಡಯ್ಯಲಾಗಿದ್ದು ಡಿಜೆ ಸೌಂಡ್‌ಗೆ ಯುವ ಸಮುದಾಯ ಕುಣಿದು ಕುಪ್ಪಳಿಸಿದರು.

Edited By : Nagesh Gaonkar
PublicNext

PublicNext

09/12/2024 05:15 pm

Cinque Terre

12.45 K

Cinque Terre

1

ಸಂಬಂಧಿತ ಸುದ್ದಿ