ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಸಂವಿಧಾನದ ಪರವಾದ ಧ್ವನಿ ಮೊಳಗಿದಾಗ ಮಾತ್ರ ಸಮಾನತೆ ಸಾಧ್ಯ

ಕೊಡಗು: ಆರೋಗ್ಯಯುತ ಸಮಾಜದೆಡೆಗೆ ಮುನ್ನಡೆಯಲು ನಮಗುಳಿದಿರುವ ಏಕೈಕ ಹಾದಿಯಾಗಿರುವ ಸಂವಿಧಾನದ ಪರವಾದ ಧ್ವನಿ ಮೊಳಗಿದಾಗ ಮಾತ್ರ ಸಮಾನತೆ ಮತ್ತು ಭಾತೃತ್ವವನ್ನು ಉಳಿಸಲು ಸಾಧ್ಯವೆಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ಸಂವಿಧಾನ ಓದು ಅಧ್ಯಯನ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸರಿಯಾದ ನಿರ್ಧಾರಗಳನ್ನು ತಳೆಯಲು ಸಂವಿಧಾನದ ಅರಿವು ನಮಗೆ ಬೇಕಾಗಿದೆ. ಬದುಕಿನಲ್ಲಿ ಕಾನೂನಿನ ಪರಿಜ್ಞಾನದೊಂದಿಗೆ ಮೌಲ್ಯಗಳು ಅತ್ಯವಶ್ಯವೆಂದು ಹೇಳಿದರು.

ಶಾಂತಿಯುತವಾದ, ಭಾತೃತ್ವದ ಸಮಾನತೆಯ ಸಮ ಸಮಾಜದ ನಿಮಾಣಕ್ಕೆ ‘ಸಂವಿಧಾನ' ಒಂದೇ ಹಾದಿಯಾಗಿದ್ದು, ಈ ನಿಟ್ಟಿನಲ್ಲಿ ಸಂವಿಧಾನದ ಪರವಾದ ಧ್ವನಿಗಳನ್ನು ಹುಟ್ಟು ಹಾಕಲು ಸಂವಿಧಾನದ ಓದು ಶಿಬಿರಗಳನ್ನು ರಾಜ್ಯವ್ಯಾಪಿ ಆಯೋಜಿಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಆಳವಾಗಿ ಅರಿತ ನೂರು ಮಂದಿಯನ್ನು ಸಜ್ಜುಗೊಳಿಸುವುದು ಕಾರ್ಯಕ್ರಮದ ಮೂಲ ಉದ್ದೇಶವೆಂದರು.

Edited By : Nagesh Gaonkar
PublicNext

PublicNext

08/12/2024 07:45 am

Cinque Terre

22.37 K

Cinque Terre

0

ಸಂಬಂಧಿತ ಸುದ್ದಿ