ಬೆಂಗಳೂರು : ಇತ್ತೀಚಿಗಷ್ಟೇ ಮಗುವಿನಗೆ ಜನ್ಮ ನೀಡಿ ತಾಯಿ ಪಟ್ಟ ಅಲಂಕರಿಸಿದ್ದ ಚಿತ್ರನಟಿ ದೀಪಿಕಾ ಪಟುಕೋಣೆ ನಗರದಲ್ಲಿ ನಡೆದ ದಿಲ್ಜಿತ್ ದೋಸಂಜ್ಸ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೇ ದಿಲ್ಜಿತ್ ಗೆ ದೀಪಿಕಾ ಪಡುಕೋಣೆ ಕನ್ನಡ ಪಾಠ ಹೇಳಿರುವ ವಿಡಿಯೋ ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ.
ಇನ್ಸ್ಟಾ ಗ್ರಾಂನಲ್ಲಿರುವ ಈ ವಿಡಿಯೋದಲ್ಲಿ ವೇದಿಕೆಯ ಹಿಂದೆ ದೀಪಿಕಾ ಕಾಣಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ವೇದಿಕೆಗೆ ಆಹ್ವಾನಿಸಲಾಗುತ್ತದೆ. ಐ ಲವ್ ಯೂ ಎಂದು ಕನ್ನಡದಲ್ಲಿ ಹೇಳುವುದು ಹೇಗೆಂದು ದೀಪಿಕಾ ಪಡುಕೋಣೆ ದಿಲ್ಜಿತ್ ಗೆ ಹೇಳಿಕೊಡುವ ವೇಳೆ ಜನರು ಹರ್ಷೋದ್ಗಾರ ಮಾಡಿ ಸಂಭ್ರಮಿಸಿದ್ದಾರೆ.
PublicNext
07/12/2024 01:08 pm