ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್‌ ಬಾಸ್ ಮನೆಯಲ್ಲಿ ನಾಮಿನೇಷನ್ ಮೆಗಾವಾರ್

ಬಿಗ್‌ ಬಾಸ್ ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ಈ ಬಾರಿ ಒಂತಾರ ಹೊಸತಾಗಿ ನಾಮಿನೇಷನ್ ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳು ಮನೆಯಿಂದ ಆಚೆ ಕಳುಹಿಸಲು ಇಷ್ಟ ಪಡುವ ಸ್ಪರ್ಧಿಗಳ ತಲೆ ಮೇಲೆ ಬಾಟಲಿಯಿಂದ ಹೊಡೆದು ನಾಮಿನೇಟ್ ಮಾಡಬೇಕು. ಮೋಕ್ಷಿತಾ, ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ.

ಈ ವೇಳೆ ಮಂಜು ಹಾಗೂ ಮೋಕ್ಷಿತಾ ಮಧ್ಯೆ ಯಾವಾಗಲೂ ಇತ್ತೀಚಿಗೆ ವಾರ್ ನಡೆಯುತ್ತಲೇ ಇರುತ್ತೆ. ಮೋಕ್ಷಿತಾ ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮಂಜು, ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್‌ಗೆ ಬರ್ತೀನಿ ಎಂದಿದ್ದಾರೆ. 'ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಕೇಳಿದ್ದಾರೆ.

ಆಗ ಕೆರಳಿದ ಮೋಕ್ಷಿತಾ, ಅಂದರೆ ನೀವು ಮನೆಯಲ್ಲಿ ಕಾಣಿಸಿಕೊಳ್ಳೋದು ಒಬ್ಬರಿಗೆ ತೆಗೆದುಕೊಂಡು ಹೋಗಿ ಇಬ್ಬರಿಗೆ ಕೊಟ್ಟಾಗಲೇ ಅಂತಾನಾ? ನೀವು ಯಾರು ನನಗೆ ವೈಸ್ ರೈಸ್ ಮಾಡೋಕೆ ಎಂದು ಅವಾಜ್ ಹಾಕಿದ್ದಾರೆ. ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ. ನನ್ನ ನಿರ್ಧಾರ ಎಂದು ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ.

Edited By : Shivu K
PublicNext

PublicNext

26/12/2024 03:07 pm

Cinque Terre

53.7 K

Cinque Terre

0