ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಮಕೃಷ್ಣ ಭಟ್ಟರಿಗೆ ಗೌರವ ಸನ್ಮಾನ
ಯಲ್ಲಾಪುರ
ಡಿ.23 ರಂದು ಮಂಚಿಕೇರಿಯಲ್ಲಿ ನಡೆಯಲಿರುವ ಯಲ್ಲಾಪುರ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ರಾಮಕೃಷ್ಣ ಭಟ್ಟ ಧುಂಡಿಯವರನ್ನು, ಶುಕ್ರವಾರ ಅವರ ಮನೆಗೆ ತೆರಳಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಿ, ಗೌರವಿಸಿ, ಸಮ್ಮೇಳನಕ್ಕೆ ಆತ್ಮೀಯವಾಗಿ ಆಮಂತ್ರಿಸಲಾಯಿತು.
ಕ.ಸಾ.ಪ.ತಾಲೂಕಾ ಘಟಕದ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್, ಗೌರವ ಕಾರ್ಯದರ್ಶಿ ಜಿ.ಎನ್.ಭಟ್ ತಟ್ಟಿಗದ್ದೆ, ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ, ಟಿ.ವಿ.ಕೋಮಾರ್, ಟಿ.ವಿ.ಹೆಗಡೆ, ಕೃಷ್ಣ ಭಟ್ಟ ನಾಯಕನಕೆರೆ, ನವೀನ ಹೆಗಡೆ, ವೇಣುಗೋಪಾಲ ಮದ್ಗುಣಿ, ಗುರು ಭಟ್ಟ ಹಾಸಣಗಿ, ಗ.ರಾ.ಭಟ್ಟ, ಗಣೇಶ ಹೆಗಡೆ ಮುಂತಾದವರು ಇದ್ದರು.
Kshetra Samachara
06/12/2024 05:45 pm