ಯಲ್ಲಾಪುರ
ಜಿಲ್ಲಾ ಪಂಚಾಯತ ಉತ್ತರಕನ್ನಡ, ಉಪನಿರ್ದೇಶಕರ ಕಾರ್ಯಾಲಯ ಶಿರಸಿ ಶೈ.ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಯಲ್ಲಾಪುರ ಇವರ ನೇತೃತ್ವದಲ್ಲಿ ರಾಷ್ಟ್ರೀಯ ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉತ್ತರ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಯು ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಮಾತನಾಡಿ, ಒಂದು ಅಂಕ ಮತ್ತು ಒಂದು ಮತದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಪಾರಿ ಬಸವರಾಜ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ನೆಲೆಗಟ್ಟು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.
ಯಲ್ಲಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಜಿಲ್ಲಾ ಎನ್.ವಿ.ಡಿ. ಕಾರ್ಯಕ್ರಮ ನೋಡಲ್ ಅಧಿಕಾರಿ ಎ.ಪಿ.ಸಿ. ಕುಮಾರ್ ಜಿ. ಭಟ್, ವಿಷಯ ಪರಿವೀಕ್ಷಕರಾದ ಜಿ. ಆರ್. ಹೆಗಡೆ, ಎಮ್. ಕೆ. ಮೊಗೆರ್, ಪ್ರೌಢಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಜಯ್ ನಾಯಕ್, ತಾಲೂಕ ಸಂಘದ ಚಂದ್ರಶೇಖರ್ ಸಿ.ಎಸ್. ಯಲ್ಲಾಪುರ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಂತೋಷ್ ಕುಮಾರ್ ಜಗಳೂರು, ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್ ಅಧ್ಯಕ್ಷ ಜನಾರ್ಧನ್ ಗಾಂವಕರ, ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮುಂತಾದವರು ಇದ್ದರು. ಶಿಕ್ಷಕರಾದ ರಾಘವೇಂದ್ರ ಹೆಗಡೆ ಇಡುಗುಂದಿ ಮತ್ತು ಶ್ರೀಧರ ಹೆಗಡೆ ಬಿಸ್ಗೋಡ ನಿರೂಪಿಸಿದರು. ಶಾಮಲಾ ಕೆರೆಗದ್ದೆ, ಚಿದಾನಂದ ಹಳ್ಳಿ, ಮಂಗಳಗೌರಿ ನಾಯಕ್, ಪ್ರಶಾಂತಿ ನಾಯ್ಕ, ಷಣ್ಮುಖ ಹೆಗಡೆ ಹಂಸನಗದ್ದೆ ನಿರ್ವಹಿಸಿದರು
Kshetra Samachara
14/12/2024 12:46 pm