ಸಿದ್ದಾಪುರ: ಬಂಗಾರಪ್ಪ ಅಭಿಮಾನಿ ಬಳಗ ಗೋಳಗೋಡ ಹಾಗೂ ಊರ ನಾಗರಿಕರ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸ್ಮರಣಾರ್ಥ ಡಿಸೆಂಬರ್ 24 ರಂದು ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಗಂಗಾಧರ ನಾಯ್ಕ ಗೋಳಗೋಡ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸ್ಮರಣಾರ್ಥ ಎರಡನೇ ವರ್ಷದ ಪ್ರೋ ಕಬ್ಬಡ್ಡಿ ಪಂದ್ಯಾವಳಿ ಡಿಸೆಂಬರ 24 ರಂದು ಗೋಳಗೋಡಿನ ಈಶ್ವರ ದೇವಸ್ಥಾನದ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುವ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಪ್ರೇಕ್ಷಕರ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಹೆಸರಾಂತ ಕಬ್ಬಡ್ಡಿ ಆಟಗಾರರನ್ನು ಒಳಗೊಂಡ ಪಂದ್ಯಾವಳಿ ಇದಾಗಿದ್ದು, 8 ಜನ ಪ್ರಮುಖ ಐಕಾನ್ ಸೇರಿ ಪ್ರತಿ ತಂಡದಲ್ಲಿ ಮೂವರು ಐಕಾನ್ ಪ್ರೇಯರ್ ಒಳಗೊಂಡ 8 ತಂಡಗಳು ಸೆಣಸಲಿವೆ.
ಕಿರಣ್ ಬೆಂಗಳೂರು, ರಾಕೇಶ ಮಂಡ್ಯ, ಸೋಮು ಭದ್ರಾವತಿ, ವಿನೋದ ಬಾಗಲಕೋಟೆ, ಮಂಜು ಬೆಂಗಳೂರು, ಗಣೇಶ ವಿಜಯಪುರ, ಕೃಪಸಾಗರ, ವಿನೋದ ನಾಯ್ಕ ಭಟ್ಕಳ ಇವರು ಪ್ರಮುಖ 8 ಐಕಾನ್ ಆಟಗಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಕಬ್ಬಡ್ಡಿ ಪಂದ್ಯಾವಳಿಯ ಪ್ರಶಸ್ತಿ ವಿಜೇತ ತಂಡಕ್ಕೆ ಪ್ರಥಮ 70,000 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ 40,000, ತೃತೀಯ ಹಾಗೂ ಚತುರ್ಥ ತಲಾ 10,000, ಬೆಸ್ಟ್ ರೈಡರ್ ಹಾಗೂ ಡಿಪೆಂಡರ್ ಗೆ ಸೈಕಲ್ ಬಹುಮಾನ ನೀಡಲಾಗುವುದು ಎಂದರು.
' ರವಿವಾರ ಹರಾಜು ಪ್ರಕ್ರೀಯೆ '
ಡಿಸೆಂಬರ 24 ರಂದು ನಡೆಯುವ ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾವಳಿಯ ಹರಾಜು ಪ್ರಕ್ರೀಯೆ ಡಿ. 8 ರ ರವಿವಾರ ಗೋಳಗೋಡ ಈಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು, ಆಸಕ್ತ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾ ಪ್ರೋತ್ಸಾಹಕರು ಪಾಲ್ಗೊಳ್ಳುವಂತೆ ಗಂಗಾಧರ ಗೋಳಗೋಡ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಉಪಾಧ್ಯಕ್ಷ ನಾಗೇಂದ್ರ ವಿ.ಜಿ, ಕಾರ್ಯದರ್ಶಿ ಮಂಜು ಮಡಿವಾಳ, ಪ್ರಶಾಂತ ನಾಯ್ಕ ಗೋಳಗೋಡ, ಗಣೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ಅಣ್ಣಪ್ಪ ನಾಯ್ಕ ಇತರರು ಉಪಸ್ಥಿತರಿದ್ದರು.
Kshetra Samachara
06/12/2024 07:18 pm