ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ: ಬೈಕ್ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

ಯಲ್ಲಾಪುರ: ತಾಲೂಕಿನ ಮಾದೇವಕೊಪ್ಪದಲ್ಲಿ ಮನೆ ಮುಂದೆ ನಿಲ್ಲಿಸಿಟ್ಟ ಬೈಕ್ ಅನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

 ಮಾದೇವಕೊಪ್ಪದ ಬೆಂಡು ತಂದೆ ಜನ್ನು ಪಾಂಡ್ರಮಿಸೆ ಅವರು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿಟ್ಟ ಕಪ್ಪು ಬಣ್ಣದ ಹೀರೋ ಸ್ಪೆಂಡರ್ ಪ್ಲಸ್  ಬೈಕ್ ಕಳ್ಳತನವಾಗಿತ್ತು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಯಲ್ಲಾಪುರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ  ಬೈಕ್ ಕಳ್ಳತನ ಮಾಡಿದ್ದ ಆರೋಪಿ ಯಲ್ಲಾಪುರ ತಾಲೂಕಿನ ಜಡಗಿನಕೊಪ್ಪದ ಕೂಲಿ ಕೆಲಸದ ಪ್ರಕಾಶ ತಂದೆ ಕೃಷ್ಣ ಸಿದ್ದಿ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯು ಬೈಕ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಕಳ್ಳತನ ಮಾಡಿದ್ದ ಅಂದಾಜು 30 ಸಾವಿರ ರೂ ಮೌಲ್ಯದ ಬೈಕ್ ಅನ್ನು ತಾಲೂಕಿನ ಖಂಡ್ರನಕೊಪ್ಪ ಅರಣ್ಯದಲ್ಲಿ ಪತ್ತೆಮಾಡಿ ಜಪ್ತಿಮಾಡಲಾಗಿದೆ.

Edited By : PublicNext Desk
Kshetra Samachara

Kshetra Samachara

14/12/2024 12:04 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ