ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ : ಸಿಡಿಲು ಬಡಿದು ಇಬ್ಬರಿಗೆ ಗಾಯ - ಜಾನುವಾರು ಸಾವು

ಯಲ್ಲಾಪುರ : ಸಿಡಿಲು ಬಡಿದು ಇಬ್ಬರಿಗೆ ಗಾಯ, ಜಾನುವಾರು ಸಾವು

ಯಲ್ಲಾಪುರ

ಸಿಡಿಲು ಬಡಿದು ಇಬ್ಬರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಬೇಳಗೇರಿ ಗ್ರಾಮದಲ್ಲಿ ನಡೆದಿದೆ.

ಸಿಡಿಲಿನ ಹೊಡೆತಕ್ಕೆ ಬೇಳಗೇರಿ ಗ್ರಾಮದ 26 ವರ್ಷದ ಸುಚಿತ್ರಾ ಮಂಜುನಾಥ ಮರಾಠಿ ಹಾಗೂ 36 ವರ್ಷದ ಉದಯ ನೀಲಕಂಠ ಮರಾಠಿ ಎಂಬುವವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇದೇ ಗ್ರಾಮದ ನೀಲಕಂಠ ಮರಾಠಿ ಇವರ ಆಕಳು ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ

Edited By : PublicNext Desk
Kshetra Samachara

Kshetra Samachara

07/12/2024 11:18 am

Cinque Terre

24.74 K

Cinque Terre

0