ಮುಲ್ಕಿ : ಆರೋಗ್ಯಕರವಾಗಿರಲು ಕ್ರೀಡೆ ಅಗತ್ಯ. ಸೋಲು ಸ್ವೀಕರಿಸುವ ಗುಣವಿದ್ದಾಗ ಮಾತ್ರ ಗೆಲುವಿನ ಅನುಭವ ಮಹತ್ತರವಾಗಿರುತ್ತದೆ. ಕ್ರೀಡೆಯಲ್ಲಿ ವಿಫುಲ ಅವಕಾಶಗಳಿವೆ ಎಂದು ಮುಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ ಹೇಳಿದರು.
ಅವರು ಕಾರ್ನಾಡು ಸಿಎಸ್ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸಿ ಎಸ್ ಐ ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರೆ| ಸ್ಟೀವನ್ ಸರ್ವೋತ್ತಮ ಕ್ರೀಡಾ ಧ್ವಜಾರೋಹಣಗೈದರು.ವೇದಿಕೆಯಲ್ಲಿ ಮುಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮೀ, ದೈಹಿಕ ಶಿಕ್ಷಣ ಶಿಕ್ಷಕ ಹರಿಶ್ಚಂದ್ರ ಎಂ., ಶಾಲಾ ಹಳೆ ವಿದ್ಯಾರ್ಥಿ ನವಾಝ್ ಹುಸೇನ್, ಸಂಸ್ಥೆಯ ಸಂಚಾಲಕರಾದ ರಂಜನ್ ಜತ್ತನ್ನ ಉಪಸ್ಥಿತರಿದ್ದರು.
ಸಿಎಸ್ಐ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಝೀಠ ಮೆಂಡೋನ್ಸ ಸ್ವಾಗತಿಸಿದರು. ಸಹ ಶಿಕ್ಷಕಿ ಎಲಿಜಬೆತ್ ಪುಷ್ಪಲತ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ರೇಶ್ಮ ವಂದಿಸಿದರು.
Kshetra Samachara
06/12/2024 04:21 pm