ಮುಲ್ಕಿ : ಕ್ರೀಡೆಗಳಿಂದ ನಾಯಕತ್ವ ಗುಣ, ಧೈರ್ಯ, ಪ್ರಾಮಾಣಿಕತೆ, ಹೊಂದಾಣಿಕೆ, ಸಹಕಾರ, ದೈಹಿಕ ಶಕ್ತಿ, ಉತ್ತಮ ಆರೋಗ್ಯ ಸಾಧ್ಯ ಎಂದು ಕಿನ್ನಿಗೋಳಿಯ ಉದ್ಯಮಿ ಪೃಥ್ವಿರಾಜ್ ಆಚಾರ್ಯ ಹೇಳಿದರು.
ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ವಾರ್ಷಿಕ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕೋಶಾಧಿಕಾರಿ ಕೆ ಭುವನಾಭಿರಾಮ ಉಡುಪ, ವಹಿಸಿದ್ದರು ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಸಹ ಶಿಕ್ಷಕಿ ಸುಜಾತ ,ದೈಹಿಕ ಶಿಕ್ಷಕ ಸೃಜನ್ ಉಪಸ್ಥಿತರಿದ್ದರು,ಸಹ ಶಿಕ್ಷಕಿ ಅಮಿತಾ ವಂದಿಸಿದರು, ಅಶ್ವಿತ ನಿರೂಪಿಸಿದರು. ಬಳಿಕ ಕ್ರೀಡಾಕೂಟ ನಡೆಯಿತು.
Kshetra Samachara
06/12/2024 03:46 pm