ಕಾರವಾರ: ಇಲ್ಲಿನ ಪೊಲೀಸ್ ಕವಾಯತು ಮೈದಾನದ ಬಳಿ ಗುರುವಾರ ಸಂಜೆ ನಿಂತ ಕಾರೊಂದಕ್ಕೆ ಬೆಂಕಿ ತಗುಲಿ ಕಾರು ಸುಟ್ಟು ಕರಕಲಾಗಿದೆ.
ವಿಲಾಸ ಅಣ್ವೇಕರ ಎನ್ನುವವರಿಗೆ ಸೇರಿದ ಜೆನ್ ಕಾರನ್ನು ಮೈದಾನದ ಕಂಪೌಂಡ್ ಬಳಿ ನಿಲ್ಲಿಸಿದ್ದರು ಇದ್ದಕ್ಕಿಂದಂತೆ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿಯು ಕಾರಿನ ಆವರಿಸಿದ್ದು, ಸ್ಥಳೀಯರು ಅಕ್ಕಪಕ್ಕದ ವಾಹನಗಳನ್ನು ದೂರ ನಿಲ್ಲಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಿದ್ದಾರೆ. ಕಾರಿನಲ್ಲಿ ಯಾರು ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Kshetra Samachara
05/12/2024 07:50 pm