ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಹಾವು ಸೆರೆ ಹಿಡಿದು ಕಾಡಿಗೆ ರವಾನೆ

ಕೊಡಗು: ತರಗತಿ ತೆರೆದ ಸಮಯದಲ್ಲಿ ಕಿಟಕಿಯಲ್ಲಿ ನಾಗರಹಾವು ಕಾಣಿಸಿಕೊಂಡ ಘಟನೆ ಕೊಡಗು ಕೇರಳ ಗಡಿಭಾಗದ ಕರಿಕೆ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ನಡೆದಿದೆ. ಎಂದಿನಂತೆ ವಿದ್ಯಾರ್ಥಿಗಳು ಮನೆಯಿಂದ ಶಾಲಾ ತರಗತಿಗೆ ಆಗಮಿಸಿದ್ರು ಆ ಸಮಯದಲ್ಲಿ ತರಗತಿಯನ್ನ ತೆರೆಯುತ್ತಿದ್ದಂತೆ ತರಗತಿಯೊಂದರ ಕಿಟಕಿಯಲ್ಲಿ ಹಾವು ಪ್ರತ್ಯಕ್ಷಗೊಂಡಿದ್ದು ವಿದ್ಯಾರ್ಥಿಗಳು ಭಯಬೀತರಾಗಿದ್ದಾರೆ.

ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಕಿಟಕಿಯಲ್ಲಿ ಕಾಣಿಸಿಕೊಂಡ ನಾಗರಹಾವನ್ನು ಸೆರೆ ಹಿಡಿದು ಪಟ್ಟಿಘಟ್ ಮೀಸಲು ಅರಣ್ಯಕ್ಕೆ ಸ್ಥಳಾಂತರ ಮಾಡಲಾಯಿತು. ಶಾಲಾ ಸಮಯದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದ್ದ ನಾಗರ ಹಾವನ್ನು ಪಾಣತ್ತೂರಿನ ಉರಗ ತಜ್ಞ ರೆಜಿ ಅವರು ಸೆರೆ ಹಿಡಿದರು. ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಪರಮೇಶ್ ಅರಣ್ಯ ಸಿಬ್ಬಂದಿ ಚಂದ್ರಶೇಖರ, ರವಿ ಹಾಜರಿದ್ದರು.

Edited By : Suman K
Kshetra Samachara

Kshetra Samachara

05/12/2024 06:52 pm

Cinque Terre

160

Cinque Terre

0

ಸಂಬಂಧಿತ ಸುದ್ದಿ