ಉಡುಪಿ: ಮೃತ ವ್ಯಕ್ತಿಯ ಬಳಿ ಸಿಕ್ಕಿದ ಹಣವನ್ನು ಮೃತನ ಪತ್ನಿಗೆ ಹಸ್ತಾಂತರ ಮಾಡಿರುವ ನಗರ ಪೋಲಿಸ್ ಠಾಣೆಯ ಪೊಲೀಸರ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮೃತನ ಬಳಿ ಪತ್ತೆಯಾದ 10,620 ನಗದನ್ನು ಎ.ಎಸ್. ಐ ಸುಭಾಸ್ ಕಾಮತ್, ಹೆಡ್ ಕಾನ್ ಸ್ಟೇಬಲ್ ಮಾಲಿಂಗ ವಾರಸುದಾರರನ್ನು ಠಾಣೆಗೆ ಕರೆಸಿ ಹಸ್ತಾಂತರ ಮಾಡಿದರು. ಕೆಲವು ದಿನಗಳ ಹಿಂದೆ ನಗರದ ಸಿಟಿ ಬಸ್ಸು ನಿಲ್ದಾಣದಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿದ್ದರು.
ಬಳಿಕ ಶವವನ್ನು ಜಿಲ್ಲಾಸ್ಪತ್ರೆಯ ಶವ ರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ಸಮಾಜಸೇವಕರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲೆಂದು, ಮೃತನ ಜೇಬು ತಡಕಾಡಿದಾಗ ವಿಳಾಸ ಚೀಟಿ, ಮತ್ತು 10,620 ರೂ ನಗದು ಪತ್ತೆಯಾಗಿತ್ತು. ನಗದನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಮೃತ ವ್ಯಕ್ತಿ ಕಾರವಾರದ ಸೋಮನಾಥ ಅವರ ಪತ್ನಿಗೆ ಹಣ ಹಸ್ತಾಂತರಿಸಿದರು.
Kshetra Samachara
05/12/2024 01:21 pm