ಬೀದರ್: ರಾಜ್ಯ ಬಿಜೆಪಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಒಂದೆಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಮ್ ಇನ್ನೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಟೀಮ್. ಇಬ್ಬರು ನಾಯಕರ ಜಗಳದಲ್ಲಿ ಕಾರ್ಯಕರ್ತರು ಫುಲ್ ಕನ್‌ಫ್ಯೂಸ್ ಆಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಈ ಮೊದಲೇ ತಮ್ಮದೇ ತಂಡ ಕಟ್ಟಿಕೊಂಡು ವಕ್ಫ್ ವಿರುದ್ಧ ರಾಜ್ಯದ ಹಲವೆಡೆ ಸಂಚರಿಸಿ ಹೋರಾಟ ನಡೆಸಿದರು.
ಇದೀಗ ಬಿ.ವೈ ವಿಜಯೇಂದ್ರ ನೇತೃತ್ವದ ಟೀಂ ವಕ್ಫ್ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಇಂದು ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ವಿಜಯೇಂದ್ರ ನೇತೃತ್ವದ ಬಿಜೆಪಿ ಟೀಂ ಜನಾಂದೋಲನ ಹೋರಾಟ ಹಮ್ಮಿಕೊಂಡಿದೆ.
ಈಗ ಬಿಜೆಪಿ ಕಾರ್ಯಕರ್ತರಲ್ಲಿ ನಾವು ಯಾರನ್ನು ಬೆಂಬಲಿಸಬೇಕು ಎನ್ನುವ ದೊಡ್ಡ ಕನ್ ಫ್ಯೂಸ್ ಶುರುವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬೆಂಬಲಿಸುವುದೋ ಕಟ್ಟಾ ಹಿಂದೂವಾದಿ ಯತ್ನಾಳ್ ಗುಂಪನ್ನು ಬೆಂಬಲಿಸುವುದೋ ಎಂಬ ಗೊಂದಲ ಕಾರ್ಯಕರ್ತರನ್ನು ಕಾಡುತ್ತಿದೆ.
ಇದರಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲೇ ಗುಂಪುಗಳಾಗಿವೆ. ವಿಜಯೇಂದ್ರ ಅಭಿಮಾನಿಗಳು ಅವರ ಬಣದ ಹೋರಾಟ ಬೆಂಬಲಿಸಿದರೆ ಯತ್ನಾಳ್ ಅಭಿಮಾನಿಗಳು ಅವರ ಬಣದ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಈ ರೀತಿ ಕಾರ್ಯಕರ್ತರೂ ಒಂದೊಂದು ದಿಕ್ಕು ಆಗಿದ್ದರೆ ಹೋರಾಟ ಹಳ್ಳ ಹಿಡಿಯುವುದಂತೂ ಗ್ಯಾರಂಟಿ ಎಂಬ ಸ್ಥಿತಿ ನಿರ್ಮಾಣವಾಗಿದೆ.
ವರದಿ:ಯೋಹಾನ್ ಪಿ ಹೊನ್ನಡ್ಡಿ ಬೀದರ್
PublicNext
04/12/2024 09:13 pm