ಉಡುಪಿ: ರಥಬೀದಿಯ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ರಥಾರೋಹಣ ಕಾರ್ಯಕ್ರಮ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ದೇವಾಲಯವನ್ನು ವಿಶೇಷವಾಗಿ ಹೂಗಳಿಂದ ಅಲಂಕಾರ ಮಾಡಿ, ಬಲಿ ಉತ್ಸವ, ರಥ ಶುದ್ಧಿ, ನರ್ತನ ಬಲಿಯೊಂದಿಗೆ ದೇವರ ರಥಾರೋಹಣ ಸಂಪನ್ನಗೊಂಡಿತು. ಈ ಪ್ರಯುಕ್ತ ನಡೆದ ಅನ್ನಸಂತರ್ಪಣೆ ಅಂಗವಾಗಿ ಪಲ್ಲ ಪೂಜೆಯನ್ನು ಶ್ರೀಪಾದರು ನೆರವೇರಿಸಿದರು.
Kshetra Samachara
04/12/2024 05:24 pm