ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ದಾನಿಗಳಿಂದ ಸಾರ್ವಜನಿಕ ಅನ್ನ ಸಂತರ್ಪಣೆ - ಸಹಸ್ರಾರು ಮಂದಿ ಭಾಗಿ

ಬ್ರಹ್ಮಾವರ: ಸೀತಾನದಿ ತೀರದಲ್ಲಿರುವ ಉದ್ಬವ ಗಣಪತಿ ದೇವಸ್ಥಾನದಲ್ಲಿ ಡಿಸೆಂಬರ್ 3ರಿಂದ 6ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ರಥೋತ್ಸವ ಜರುಗಲಿದೆ.

ಮಂಗಳವಾರ ಬೆಳಿಗ್ಗೆ125 ತೆಂಗಿನಕಾಯಿ ಗಣಹೋಮ ಜರುಗಿತು. ಮಧ್ಯಾಹ್ನ ಪಡುಬೆಟ್ಟು ಬೀಡು ಸೂರಮ್ಮ ನಾಗಮ್ಮ ಶೆಟ್ಟಿ ಇವರ ಕುಟುಂಭಿಕರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಸಹಸ್ರಾರು ಭಕ್ತಾಧಿಗಳುಪೂಜೆ ಮತ್ತು ಉತ್ಸವದಲ್ಲಿ ಭಾಗಿಯಾಗಿ ಅನ್ನಪ್ರಸಾದ ಪಡೆದರು.

ಗುರುವಾರ ಅಧಿವಾಸ ಹೋಮ,ಪಂಚವಿಂಶತಿಕಲಶಾಭಿಷೇಕ ಮಧ್ಯಾಹ್ನ ರಥಾರೋಹಣ ಸಂಜೆ ರಥೋತ್ಸವ ಜರುಗಲಿದ್ದು ಶುಕ್ರವಾರ ತುಲಾಭಾರ ಸೇವೆ ಜರುಗಲಿದೆ.ದೇವಸ್ಥಾನದ ಅರ್ಚಕರು ವ್ಯವಸ್ಥಾಪನಾ ಸಮತಿಯ ಅಧ್ಯಕ್ಷರು ಮತ್ತು ಸದಸ್ಯರು ಈ ಸಂದರ್ಬ ಉಪಸ್ಥಿತರಿದ್ದರು.

Edited By : Vinayak Patil
PublicNext

PublicNext

03/12/2024 05:22 pm

Cinque Terre

18.33 K

Cinque Terre

0

ಸಂಬಂಧಿತ ಸುದ್ದಿ