ಬ್ರಹ್ಮಾವರ: ಕರಾವಳಿ ಕರ್ನಾಟಕದ ಪದ್ಮಶಾಲಿಗರ ಮೂಲಕ್ಷೇತ್ರ ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಮಾಜದ ಅಭ್ಯುದಯ ಏಕತೆಗೆ ಸತತ 9 ವರ್ಷದಿಂದ ಪ್ರತಿ ತಿಂಗಳ ಮೊದಲ ಭಾನುವಾರ ದೇವಸ್ಥಾನದಲ್ಲಿ ಜರುಗುವ ಸತ್ಯನಾರಾಯಣ ಪೂಜೆ ಡಿಸೆಂಬರ್ 1ರಂದು 226 ನೇ ಸತ್ಯನಾರಾಯಣ ಪೂಜೆ ಜರುಗಿತು.
ಸಮಾಜದ ಮತ್ತು ದೇವಸ್ಥಾನದ ಅಭಿವೃದ್ಧಿಗಾಗಿ ಮಾಡಲಾದ ಸಂಕಲ್ಪದಿಂದ ಕಳೆದ 9 ವರ್ಷದಿಂದ ನಾನಾ ಭಕ್ತರಿಂದ ನಡೆಯುವ ಸತ್ಯನಾರಾಯಣ ಪೂಜೆಯು 48 ಬಾರಿಯ ಬಳಿಕ 4 ಸಾರಿ ಉದ್ಯಾಪನಾ ಪೂಜೆ ನಡೆದಿತ್ತು. ಆಬಳಿಕನಾನಾ ಅಭಿವೃದ್ಧಿಕಾರ್ಯ ನಡೆದು ಇದೀಗ ಸಮಗ್ರ ಜೀರ್ಣೋದ್ಧಾರಗೊಂಡು 2025 ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.
ಸುಬ್ರಹ್ಮಣ್ಯ ಉಂಗ್ರಪಳ್ಳಿ ನಾಯರ್ ಬೆಟ್ಟು ಇವರಿಂದ ಪೂಜಾ ಕಾರ್ಯ ನೆರವೇರಿತು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಆಡಳಿತ ಮಂಡಳಿಯಅಧ್ಯಕ್ಷ ಡಾ, ಜಯರಾಮ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವಸಮಿತಿಯ, ಅಧ್ಯಕ್ಷ ಎಚ್. ಏ. ಗೋಪಾಲ್, ಯುವ ಸಂಘಟನೆಯ ಅಧ್ಯಕ್ಷ ಸಂಜೀವ ಶೆಟ್ಟಿಗಾರ್ ಮಹಿಳಾ ವೇದಿಕೆ ಸಂಚಾಲಕಿ ಆಶಾಲತಾ ವಿಠಲ್ ಶೆಟ್ಟಿಗಾರ್ ಇನ್ನಿತರ ಪಧಾಧಿಕಾರಿಗಳಾದ ಭಾಸ್ಕರ್ ಶೆಟ್ಟಿಗಾರ್, ಡಾ. ಕೆ ಶಿವಪ್ರಸಾದ್ ಶೆಟ್ಟಿಗಾರ್, ಅರುಣ್ ಶೆಟ್ಟಿಗಾರ್, ವಿನಯ ಕುಮಾರ್ ಉಪಸ್ಥಿತರಿದ್ದರು.
Kshetra Samachara
03/12/2024 10:46 pm