ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ನ್ಯಾಯ ಒದಗಿಸುವಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

ಮಂಗಳೂರು: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ದೌರ್ಜನ್ಯದಿಂದ ನೊಂದ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ನ್ಯಾಯ ಒದಗಿಸುವಂತೆ ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ಇತಿಹಾಸ ಪ್ರಸಿದ್ಧ ಮಹಾತೋಭರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಯಿತು.

ಇದೇ ಸಂದರ್ಭ ಡಿ.4ರಂದು ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯ ಯಶಸ್ಸಿಗಾಗಿ ಪ್ರಾರ್ಥನೆ ಮಾಡಲಾಯಿತು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷೆ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲದ ಅಧ್ಯಕ್ಷೆ ಶಿವಕುಮಾ‌ರ್ ಕಲ್ಲಿಮಾ‌ರ್, ಶಶಿಧ‌ರ್ ನಾಯಕ್, ಸಂತೋಷ್ ರೈ ಕೈಕಾರ, ನಾಗೇಶ್ ಟಿ.ಎಸ್, ನಾಗೇಂದ್ರ ಬಾಳಿಗೆ ಅವರು ಪ್ರಾರ್ಥನೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಸಾದ ವಿತರಿಸಿದರು.

ಡಿ.4 ರಂದು ಮಂಗಳೂರಿನಲ್ಲಿ ಹಿಂದು ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬಿಜೆಪಿ ಮಂಡಲದ ವತಿಯಿಂದ ಮನವಿ ಮಾಡಲಾಗಿದೆ.

Edited By : Suman K
Kshetra Samachara

Kshetra Samachara

03/12/2024 02:38 pm

Cinque Terre

4.49 K

Cinque Terre

0

ಸಂಬಂಧಿತ ಸುದ್ದಿ