ಕಟೀಲು : ಆರ್ಥಿಕ ಕೊರತೆಯಿಂದಾಗಿ ಯಾರೂ ಕೂಡ ಶಿಕ್ಷಣವಂಚಿತರಾಗಬಾರದು. ನೂರಾರು ವಿದ್ಯಾರ್ಥಿವೇತನಗಳು ಶಿಕ್ಷಣಕ್ಕಾಗಿ ನೆರವು ನೀಡುತ್ತಿವೆ ಎಂದು ನಿವೃತ್ತ ಶಿಕ್ಷಕ ಕರ‍್ಪೆ ನಾರಾಯಣ ನಾಯ್ಕ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಗಳು ಹಾಗೂ ಪದವೀಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನಗಳ ಮಾಹಿತಿ ನೀಡಿದರು.
ವಿವಿಧ ಜಾತಿಯವರಿಗೆ, ವಿಕಲಾಂಗರಿಗೆ, ಕಾರ್ಮಿಕರ ಮಕ್ಕಳಿಗೆ ಹೀಗೆ ನಾನಾ ವಿಭಾಗದ ವಿದ್ಯಾರ್ಥಿಗಳಿಗೆ, ಸರಕಾರಗಳಿಂದ, ವಿವಿಧ ಸಂಘ ಸಂಸ್ಥೆಗಳಿಂದ, ಜಾತಿಸಂಘಟನೆಗಳಿಂದ, ದಾಬಿಗಳಿಂದ ವಿದ್ಯಾರ್ಥಿವೇತನಗಳು ಸಿಗುತ್ತಿದ್ದು, ಅರ್ಜಿ ಸಲ್ಲಿಸುವ ಮೂಲಕ ಸತತ ಪ್ರಯತ್ನದಿಂದ ಆರ್ಥಿಕ ನೆರವನ್ನು ಪಡೆಯಲು ಸಾಧ್ಯವಿದೆ. ಶಿಕ್ಷಣದ ಬಳಿಕ ಉದ್ಯೋಗ ಪಡೆದು ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕು. ಹಣವೇ ಮುಖ್ಯ ಅಲ್ಲ. ಮಾನವೀಯತೆಯೇ ಮುಖ್ಯ ಎಂದು ಅವರು ಹೇಳಿದರು.
ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ಕುಸುಮಾವತಿ, ರಾಜಶೇಖರ ಎನ್, ಗಿರೀಶ್ ತಂತ್ರಿ ವೇದಿಕೆಯಲ್ಲಿದ್ದರು.
Kshetra Samachara
04/12/2024 09:44 pm