ಪುತ್ತೂರು: ಹೊಸ ವರ್ಷದ ಆಗಮನಕ್ಕೆ ಕೆಲವು ದಿನಗಳು ಬಾಕಿ ಇರುವ ಬೆನ್ನಲ್ಲೇ ರಬ್ಬರ್, ಕಾಳುಮೆಣಸು, ಅಡಿಕೆ ಧಾರಣೆ ಏರುಮುಖದತ್ತ ದಾಪುಗಾಲಿ ಟ್ಟಿರುವುದು ಬೆಳೆಗಾರರಿಗೆ ಖುಷಿ ತಂದಿದೆ.
ಚಾಲಿ ಅಡಿಕೆ ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಧಾರಣೆ ನಿರೀಕ್ಷೆಯಂತೆ 450 ಗಡಿ ದಾಟಿ ಮುನ್ನುಗಿದೆ. ಕ್ಯಾಂಪ್ಲೋ ಧಾರಣೆ 440 ರೂ.ನಲ್ಲಿದೆ. ಡಿ. 3ರಂದು ಹೊರ ಮಾರುಕಟ್ಟೆಯಲ್ಲಿ ಸಿಂಗಲ್
ಚೋಲ್‌ಗೆ 450ರಿಂದ 455 ರೂ. ತನಕ ಧಾರಣೆ ಕಂಡು ಬಂದಿದೆ. ಹೊಸ ಅಡಿಕೆ, ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿದೆ.
ರಬ್ಬರ್ ಧಾರಣೆಯಲ್ಲಿ ಏರಿಕೆ ಕಾಣು ತ್ತಿದೆ. ನ. 27ರಂದು ಕ್ಯಾಂಪ್ಲೋದಲ್ಲಿ ರಬ್ಬರ್ ಗ್ರೇಡ್‌ಗೆ 186 ರೂ., ಸ್ಟಾಪ್‌ಗೆ 121 ರೂ. ದಾಖಲಾಗಿತ್ತು. ಡಿ. 3ರಂದು ರಬ್ಬರ್ ಗ್ರೇಡ್ ಗೆ 194 ರೂ., ಸ್ಯಾಪ್ ಗೆ 127 ರೂ. ಗೆ ಏರಿದೆ. ಹಲವು ತಿಂಗಳಿನಿಂದ ಸ್ಥಿರವಾಗಿದ್ದ ಕಾಳು ಮೆಣಸು ಧಾರಣೆ ಜಿಗಿತ ಕಂಡಿದೆ.
Kshetra Samachara
04/12/2024 10:18 pm