ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಪುಂಡಾಟ- ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

ಮಂಗಳೂರು: ಹಿಂದೂ ಸಂಘಟನೆಗಳ ಪ್ರತಿಭಟನೆ ಸಭೆ ವೇಳೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ವರದಿಗೆ ತೆರಳಿದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಕ್ಲಾಕ್ ಟವರ್ ಬಳಿ ಹಿಂದೂ ಪರ ಕಾರ್ಯಕರ್ತರು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭ ರಸ್ತೆ ತಡೆದು ಪೊಲೀಸರ ಜೊತೆಗೂ ಮಾತಿನ ಚಕಮಕಿ‌ ನಡೆದಿದೆ.

ವರದಿಗೆ ತೆರಳಿದ ಮಾಧ್ಯಮದವರನ್ನು ತಳ್ಳಿ, ಹಲ್ಲೆಗೆ ಯತ್ನಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಗಳ ವೀಡಿಯೊ ಜರ್ನಲಿಸ್ಟ್ ಗಳ ಮೇಲೆ ಮುಗಿ ಬಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಈ ವೇಳೆ ವರದಿ ಬಹಿಷ್ಕರಿಸಿ ಮಾಧ್ಯಮ ಪ್ರತಿನಿಧಿಗಳು ವಾಪಸ್‌ ತೆರಳಿದರು.

Edited By : Nagesh Gaonkar
PublicNext

PublicNext

04/12/2024 04:24 pm

Cinque Terre

13.17 K

Cinque Terre

1

ಸಂಬಂಧಿತ ಸುದ್ದಿ