ನವದೆಹಲಿ : ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ರಾಷ್ಟ್ರೀಯ ಸ್ವಯಂಸೇವ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಹೆಚ್ಚು ಮಕ್ಕಳಾದರೆ ಹಣ ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಜನರಿಗೆ ಅವರು ಏನು ನೀಡುತ್ತಾರೆ? ಅವರು ಹೆಚ್ಚು ಮಕ್ಕಳಿಗೆ ಜನ್ಮ ನೀಡಿದವರ ಬ್ಯಾಂಕ್ ಖಾತೆಗೆ ಅವರು 1,500 ರೂ. ನೀಡುತ್ತೀರಾ ಎಂದು ಕೇಳಿದ್ದಾರೆ.
ಮೋಹನ್ ಭಾಗವತ್ ಅವರು ತಮ್ಮ ಆಪ್ತರನ್ನು ಸಿಎಂ ಮಾಡಲು ಪ್ರಯತ್ನಿಸುತ್ತಿದ್ದಾರೆ, ಇದಕ್ಕಾಗಿ ಅವರು ಯೋಜನೆಯೊಂದನ್ನು ಪರಿಚಯಿಸಬಹುದು ಎಂದು ಹೇಳಿದರು.
ಜನಸಂಖ್ಯೆ ಫಲವತ್ತತೆ ದರ 2.1ಕ್ಕಿಂತ ಕಡಿಮೆಯಾದರೆ ಸಮಾಜ ನಾಶವಾಗುತ್ತದೆ. ಹೀಗಾಗಿ ಪ್ರತಿ ದಂಪತಿ ಮೂವರು ಮಕ್ಕಳನ್ನು ಹೆರಬೇಕು ಎಂದಿದ್ದ ಮೋಹನ್ ಭಾಗವತ್ ಕರೆ ನೀಡಿದ್ದರು.
ಜನಸಂಖ್ಯಾ ಅಧ್ಯಯನಗಳ ಪ್ರಕಾರ, ಒಂದು ಸಮುದಾಯದ ಜನಸಂಖ್ಯೆಯು 2.1 ರ ಫಲವಂತಿಕೆ ದರಕ್ಕಿಂತ ಕಡಿಮೆಯಾದಾಗ, ಆ ಸಮಾಜವು ಅಳಿವಿನಂಚಿಗೆ ಸೇರುತ್ತದೆ. ಆ ಸಮುದಾಯ ತಂತಾನೆ ಕಣ್ಮರೆಯಾಗುತ್ತದೆ. ಇದರಿಂದ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವ ಕಳೆದುಕೊಂಡಿವೆ. ಆದ್ದರಿಂದ, ನಮ್ಮ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
PublicNext
04/12/2024 01:39 pm