ಸಿದ್ದಾಪುರ : ಪ್ರಸಕ್ತ ವರ್ಷದ ಶ್ರೀ ಸಾಲಿಗ್ರಾಮ ಮೇಳ ತಿರುಗಾಟಕ್ಕೆ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟ ಹಳಿಯಾಳದ ಉದಯೋನ್ಮುಖ ಯಕ್ಷ ಪ್ರತಿಭೆ ಯುವರಾಜ ನಾಯ್ಕ ಸೇರ್ಪಡೆಯಾಗಿದ್ದಾರೆ. ಇವರು ದಿವಾನ ಯಕ್ಷ ಸಮೂಹ ,ಯಕ್ಷತರಂಗಿಣಿ ಹಾರ್ಸಿಕಟ್ಟ ,ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ಪಡೆದು ಕಳೆದೆರಡು ವರ್ಷ ಹಟ್ಟಿಯಂಗಡಿ ಮೇಳದಲ್ಲಿ ಕಲಾ ಸೇವೆ ಸಲ್ಲಿಸಿ, ಸಿದ್ದಾಪುರ ತಾಲೂಕಿನ ಕೆಲ ಮೇಳದಲ್ಲಿ ಅತಿಥಿ ಕಲಾವಿದರಾಗಿ ಪ್ರದರ್ಶನ ನೀಡಿದ್ದಾರೆ. ಇವರು ಅಭಿಮನ್ಯು, ಪುಂಡು ವೇಷ ಸೇರಿದಂತೆ ಪಾತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ.
ಸಾಲಿಗ್ರಾಮ ಮೇಳದಲ್ಲಿ ಅವಕಾಶ ದೊರಕಿರುವುದಕ್ಕೆ ಇವರ ಅಭಿಮಾನಿಗಳು, ಯಕ್ಷ ತರಂಗಿಣಿ ಸಂಸ್ಥೆಯವರು ಮತ್ತು ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
Kshetra Samachara
03/12/2024 12:30 pm