ಸೋಶಿಯಲ್ ಮೀಡಿಯಾದಲ್ಲಿ ಕ್ರೇಜಿ ಫೋಟೋ ಶೂಟ್ ಮತ್ತು ವಿಭಿನ್ನ ಡ್ರೆಸ್ಸಿಂಗ್ ಗಾಗಿ ಉರ್ಫಿ ಸದಾ ಸುದ್ದಿಯಲ್ಲಿದ್ದು ಪಡ್ಡೆ ಹುಡುಗರ ಕಣ್ಣು ತಂಪು ಮಾಡುತ್ತಾರೆ. ಇದೀಗ ಉರ್ಫಿ ಜಾವೇದ್ ತಮ್ಮ ಹೊಸ ಡ್ರೆಸ್ ಮಾರಾಟ ಮಾಡುವುದಾಗಿ ಪೋಸ್ಟ್ ಮಾಡಿದ್ದು ಆ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೆಲೆಬ್ರಿಟೀಸ್ ಗಳು ಉಪಯೋಗಿಸಿದ ವಸ್ತುಗಳು ಮತ್ತು ಬಟ್ಟೆಗಳನ್ನು ಹರಾಜು ಹಾಕಿದ್ರೆ ಅದು ಲಕ್ಷ, ಕೋಟಿಗಳಲ್ಲಿ ಖರೀದಿಸಲಾಗುತ್ತದೆ. ಇದೀಗ ಉರ್ಫಿ ಕೂಡ ತನ್ನ ಡ್ರೆಸ್ ಮಾರಾಟಕ್ಕೆ ಹೊರಟಿದ್ದಾರೆ. ಚಿಟ್ಟೆಗಳ ಜೊತೆಗೆ ಹೂವುಗಳು ಮತ್ತು ಎಲೆಗಳಿಂದ ಉಡುಗೆ ತುಂಬಾ ಸುಂದರವಾಗಿ ಕಾಣುತ್ತದೆ. ಈಗ ಅದೇ ಉಡುಪನ್ನು ಮಾರಾಟ ಮಾಡುವುದಾಗಿ ಉರ್ಫಿ ಘೋಷಿಸಿದ್ದಾರೆ. ಆ ಡ್ರೆಸ್ ಬೆಲೆ ಕೇವಲ 3 ಕೋಟಿ 66 ಲಕ್ಷದ 99 ಸಾವಿರ. ಯಾರಿಗಾದರೂ ಆಸಕ್ತಿ ಇದ್ದರೆ ನನಗೆ ಮೆಸೇಜ್ ಮಾಡಿ ಎಂದು ಪೋಸ್ಟ್ ಮಾಡಿದ್ದಾಳೆ. ಸದ್ಯ ಉರ್ಫಿ ಪೋಸ್ಟ್ ಮತ್ತೊಮ್ಮೆ ಸುದ್ದಿಯಲ್ಲಿದೆ. ಒಂದು ಡ್ರೆಸ್ ಗೆ ರೂ.3 ಕೋಟಿಗಿಂತ ಹೆಚ್ಚು ಬೆಲೆ ಇರಬಹುದೇ ಎಂಬುದು ನೆಟ್ಟಿಗರ ಪ್ರಶ್ನೆ? .....
PublicNext
02/12/2024 07:35 pm