ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಶಾಸಕ ಯತ್ನಾಳರಿಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್: ನ ದೈನ್ಯಂ, ನ ಪಲಾಯನಂ ಎಂದ ಶಾಸಕ ಯತ್ನಾಳ

ವಿಜಯಪುರ : ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೇರಿದ್ದು, ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಬಿಎಸ್‌.ಯಡಿಯೂರಪ್ಪ ಅವರ ಬಣಗಳ ನಡುವೆ ವಾಗ್ವಾದ ನಡೆಯುತ್ತಿದೆ.

ಇದೀಗ ಶಾಸಕ ಯತ್ನಾಳ್​ಗೆ ಬಿಜೆಪಿ ಹೈಕಮಾಂಡ್​​ನಿಂದ​ ಬಿಗ್​ ಶಾಕ್​ ಎದುರಾಗಿದೆ.

ಶಾಸಕ ಯತ್ನಾಳ್​ ಹೇಳಿಕೆಗಳಿಗೆ ಸ್ಪಷ್ಟನೆ ಕೇಳಿ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ನೋಟಿಸ್​ ನೀಡಿದ್ದು, ಬಂಡಾಯ ಶಮನಕ್ಕೆ ಕೊನೆಗೂ ಹೈಕಮಾಂಡ್​ ಎಂಟ್ರಿ ಕೊಟ್ಟಿದೆ. ಬಿಎಸ್​ವೈ, ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದರು.

ವಿಜಯೇಂದ್ರ ನಿನ್ನೆಯಷ್ಟೆ ದೆಹಲಿಗೆ ಭೇಟಿ ನೀಡಿ ಯತ್ನಾಳ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ್ದರು. ವಿಜಯೇಂದ್ರ ದೂರಿನ ಬೆನ್ನಲ್ಲೇ ಇದೀಗ ಹೈಕಮಾಂಡ್​ನಿಂದ ನೋಟಿಸ್​ ಜಾರಿಯಾಗಿದ್ದು, ನೋಟಿಸ್​ಗೆ ಸೂಕ್ತ ಉತ್ತರ ಕೊಡದೇ ಇದ್ದರೆ ಯತ್ನಾಳ್​​ಗೆ ಬಿಜೆಪಿಯಿಂದ ಗೇಟ್​ಪಾಸ್​ ಸಿಗುವ ಸಾಧ್ಯತೆಯಿದೆ.

ಅತ್ತ ನೋಟಿಸ್​ ಜಾರಿಯಾದ ಬೆನ್ನಲ್ಲೇ ಇತ್ತ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ. ಪಿಕ್ಚರ್​ ಅಭಿ ದಾವಣಗೆರೆ ಮೇ ಬಾಕಿ ಹೈ, ನಮ್ಮ ತಾಕತ್ತು ದಾವಣಗೆರೆಯಲ್ಲಿ ತೋರಿಸ್ತೀವಿ. ನಿಮ್ಮ ಆಟ ಇಷ್ಟಕ್ಕೆ ನಿಲ್ಲಿಸಿ. ನಾವೆಲ್ಲ ಒಟ್ಟಾಗಿದ್ದೇವೆ. ಅಪ್ಪಾಜಿ ಕಾಲು ಮುಗಿಯೋ ಮಕ್ಕಳು ನಾವಲ್ಲ, ಮುಂದೆ ಬಿಜೆಪಿಯಲ್ಲಿ ನಾನೇ ನಂಬರ್​ ಒನ್​ ಆಗ್ತೀನಿ. ರಾಜ್ಯದಲ್ಲಿ ಬಿ ಫಾರಂ ಕೋಡೋನೆ ನಾನು ಎಂದು ಬೆಳಗಾವಿ ವಕ್ಫ್​ ಸಮಾವೇಶದಲ್ಲಿ ಯತ್ನಾಳ್​ ಕಿಡಿ ಕಾರಿದ್ದಾರೆ.

ಇನ್ನೂ ಶೋಕಾಸ್ ನೋಟಿಸ್ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ x ಖಾತೆ ಮೂಲಕ ಪ್ರತಿಕ್ರಿಯೆ ನೀಡಿ ನಾನು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲಿದ್ದು, ಅದರ ಜೊತೆಗೆ‌ ಸದ್ಯ ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ ವಾಸ್ತವಾಂಶವನ್ನು ಅವರ ಮುಂದೆ ಪ್ರಸ್ತುತಪಡಿಸುತ್ತೆನೆ.

ನನ್ನ ಬದ್ದತೆ ಮಾತ್ರ ಹಿಂದುತ್ವದ ಹೋರಾಟ, ಭ್ರಷ್ಟಾಚಾರದ ವಿರೋಧ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ರಾಜವಂಶದ ರಾಜಕೀಯಕ್ಕೆ ನನ್ನ ಹೋರಾಟ ಯಾವತ್ತು ಅಚಲವಾಗಿ ಉಳಿಯುತ್ತದೆ

ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ತಮ್ಮ ಪೆಸ್ಬುಕ್ ನಲ್ಲಿ ನ ದೈನ್ಯಂ, ನ ಪಲಾಯನಂ | ಎಂದು ಬರೆದುಕೊಂಡು ನೊಟಿಸ್ ವಿಷಯದಲ್ಲಿ ಹೆದರಿಲ್ಲಾ ಎಂಬ ಸಂದೇಶ ರವಾನಿಸಿದ್ದಾರೆ.

ಒಟ್ಟಿನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ನೊಟಿಸ್ ಜಾರಿಯಾಗಿದೆ. ಶಾಸಕ ಯತ್ನಾಳ ಕೂಡಾ ದೆಹಲಿಯಲ್ಲಿ ಇದ್ದು ಶಿಸ್ತು ಸಮಿತಿಗೆ ಅಲ್ಲಿಯೇ ಉತ್ತರಿಸುತ್ತಾರಾ ಅಥವಾ ರಾಜ್ಯಕ್ಕೆ ಮರಳಿದ ಮೇಲೆ ಉತ್ತರಿಸುತ್ತಾರಾ ಎಂದು ಕಾದು ನೋಡಬೇಕಿದೆ.

Edited By : Nirmala Aralikatti
PublicNext

PublicNext

02/12/2024 12:56 pm

Cinque Terre

11.94 K

Cinque Terre

0

ಸಂಬಂಧಿತ ಸುದ್ದಿ