ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: "ಸದಾನಂದ‌ ಗೌಡರು ಬಾಯಿ ಮುಚ್ಚಿಕೊಂಡಿರಬೇಕು"- ಶಾಸಕ ಯತ್ನಾಳ್‌ ವಾರ್ನಿಂಗ್!

ವಿಜಯಪುರ: ಸದಾನಂದ‌ ಗೌಡರು ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೇ ಹೋದರೆ ನಿಮ್ಮ ಬಂಡವಾಳ ಬಯಲು ಮಾಡ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಸದಾನಂದ ಗೌಡರಿಗೆ ವಾರ್ನಿಂಗ್ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಯತ್ನಾಳ್‌‌, ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದ ಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡ್ತೀನಿ. ನನಗಿಂತ ಕೆಟ್ಟದಾಗಿ ಸದಾನಂದ ಗೌಡ ಮಾತನಾಡಿದ್ದಾರೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ. ಸದಾನಂದ‌ ಗೌಡ ಯಾಕೆ ಗಾಬರಿಯಾಗಬೇಕು?

ಸದಾನಂದ ಗೌಡರೇ, ಗಾಬರಿಯಾಗಬೇಡಿ. ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ, ಸದಾನಂದ ಗೌಡ ದೀಪ ಈಗಾಗಲೇ ಆರಿ ಹೋಗಿದೆ. ನಾನು ಯಾರ ಜೊತೆನೂ ಎಡ್ಜಸ್ಟ್‌ ಮೆಂಟ್ ಮಾಡಿಕೊಂಡಿಲ್ಲ. ನಿನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ ಸದಾನಂದ... ಎಂದು ವ್ಯಂಗ್ಯ ಮಾಡಿದರು.

-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ

Edited By : Manjunath H D
PublicNext

PublicNext

28/11/2024 07:37 pm

Cinque Terre

30.46 K

Cinque Terre

2

ಸಂಬಂಧಿತ ಸುದ್ದಿ