ಬೀದರ್: ಕ್ರಾಂತಿಕಾರಿ ಬಸವಣ್ಣ ಪಲಾಯನವಾದಿ ಎಂಬರ್ಥದಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಜೋಕರ್. ಅವರೊಬ್ಬ ಮಾನಸಿಕ ರೋಗಿಯಾಗಿದ್ದು, ಚಿಕಿತ್ಸೆಯ ಪಡೆಯುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಯತ್ನಾಳ ಮಾನಸಿಕ ತಜ್ಞರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳೋದು ಸೂಕ್ತ. ಬಸವಣ್ಣನವರು ಹೊಳೆಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ರಣಹೇಡಿ ಎಂಬಂತೆ ಬಿಂಬಿಸುತ್ತಿದ್ದಾರೆ .ಸಂಘಿಗಳ (ಆರ್‌ಎಸ್‌ಎಸ್) ಮನವೊಲಿಸಲು ಈ ರೀತಿ ಹೇಳಿಕೆಗಳನ್ನ ಯತ್ನಾಳ ನೀಡುತ್ತಿರೊದು ಖಂಡನೀಯ.
ಬಿಜೆಪಿ ಅವರಿಗೆ ಬಸವಣ್ಣನವರ ಮತ ಬೇಕು. ಆದ್ರೆ ಲಘುವಾಗಿ ಮಾತನಾಡಿರೋ ಯತ್ನಾಳ ವಿರುದ್ದ ತುಟಿ ಬಿಚ್ಚುತ್ತಿಲ್ಲ. ಬಿಜೆಪಿ ಅವಧಿಯಲ್ಲೇ ಅತಿಹೆಚ್ಚು ದೇವಾಲಯ, ವಕ್ಫ್‌ಬೋರ್ಡ್ ನೋಟಿಸ್ ಹೋಗಿದೆ ಎಂದು ತಿಳಿಸಿದರು. ಹೋರಾಟದ ಮೂಲಕ ಬಡರೈತರನ್ನ ಬಲಿಪಶು ಮಾಡೋಕೆ ಬಿಜೆಪಿ ಹೊರಟಿದೆ ಮತ್ತು ಯತ್ನಾಳರ ಮೂಲಕ ಬಸವಣ್ಣನವರಿಗೆ ಅವಮಾನ ಮಾಡಲು ಬಿಜೆಪಿ ಚೂ ಬಿಟ್ಟಿದೆ ಎಂದು ಕಿಡಿ ಕಾರಿದ್ದರು.
PublicNext
01/12/2024 08:28 pm