ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉದ್ಯಾವರದಲ್ಲಿ ಸಾವಿನಲ್ಲೂ ಒಂದಾದ ದಂಪತಿ - ಒಂದೇ ದಿನ ಅಂತರದಲ್ಲಿ ಪತಿ, ಪತ್ನಿ ಸಾವು

ಉದ್ಯಾವರ: ಒಂದು ದಿನದ ಅಂತರದಲ್ಲಿ ದಂಪತಿ ನಿಧನ ಹೊಂದಿ ಸಾವಿನಲ್ಲೂ ಒಂದಾದ ಘಟನೆ ಉದ್ಯಾವರದಲ್ಲಿ ಸಂಭವಿಸಿದೆ.

ಕಾರ್ಕಳ ತಾಲೂಕು ಬೈಲೂರು ಮೈನ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್‌ ರೆಬೆಲ್ಲೋ (56)ಅವರು ನವೆಂಬರ್ 28ರಂದು ನಿಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್‌ ಡೇಸ (62)ಅವರು ಅಸೌಖ್ಯದಿಂದ ನವೆಂಬರ್ 29ರಂದು ನಿಧನ ಹೊಂದಿದ್ದಾರೆ.

ಉದ್ಯಾವರ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ದೇವಾಲಯದ ಪಾಲನ ಮಂಡಳಿಯಲ್ಲಿ ಮೂರು ಬಾರಿ ಉಪಾಧ್ಯಕ್ಷ, ವಾರ್ಡ್‌ನ ಗುರಿಕಾರರಾಗಿದ್ದ ಮೃತರು ಉದ್ಯಾವರ ಬೋಳಾರಗುಡ್ಡೆ ಕಲಾಯಿಬೈಲ್‌ ನಿವಾಸಿ. ಉದ್ಯಾವರ ಮಂಡಲ ಪಂಚಾಯತ್‌ ಸದಸ್ಯರಾಗಿ, ಒಂದು ಅವಧಿಯಲ್ಲಿ ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷರಾಗಿ ಸುದೀರ್ಘ‌ ಸುಮಾರು ಮೂರು ದಶಕಗಳ ಕಾಲ ಗ್ರಾ.ಪಂ. ಸದಸ್ಯರಾಗಿ ಸಮಾಜಮುಖೀ ಸೇವೆಯನ್ನು ಸಲ್ಲಿಸಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ

Edited By : PublicNext Desk
PublicNext

PublicNext

30/11/2024 09:13 am

Cinque Terre

13.83 K

Cinque Terre

0

ಸಂಬಂಧಿತ ಸುದ್ದಿ